ಈಗಂತು ಅಮೆರಿಕದ ಯಾವ ಅಂಗಡಿಗೆ ಹೋದರೂ ಒಂದಿಷ್ಟು ತಲೆಬುರುಡೆ, ಅಸ್ಥಿಪಂಜರ (ನಿಜವಾದ್ದಲ್ಲ ಬಿಡಿ), ಪ್ರೇತ-ಪಿಶಾಚಿಯ ವೇಷಗಳು, ಬೃಹದಾಕಾರದ ಕುಂಬಳಕಾಯಿಗಳು, ದಿಗುಲುಗೊಳಿಸುವ ಮುಖವಾಡಗಳು, `ಗುಮ್ಮ‘ನಂತೆ ಕೂಗಿ ಹೆದರಿಸುವ ಚಿತ್ರ-ವಿಚಿತ್ರ ರೂಪಿ ಬೊಂಬೆಗಳು (ಗುಮ್ಮ ಕೂಗಿದ್ದನ್ನು ಕೇಳಿಲ್ಲ ಎನ್ನುವುದು ಬೇರೆ ಮಾತು!) ಕಾಣುತ್ತವೆ.
ಈ `ಭೂತಚೇಷ್ಟೆ‘ಯೆಲ್ಲಾ ಹಾಲೊವೀನ್ ಹಬ್ಬಕ್ಕಾಗಿ. ಅಕ್ಟೋಬರ್ 31ರ ಹಾಲೊವೀನ್ ಪಾರ್ಟಿಗಾಗಿ ಏನೆಲ್ಲಾ ಕುಚೇಷ್ಟೆಗಳನ್ನು ಮಾಡಬಹುದು? ಯಾರನ್ನು ಹೇಗೆ ಹೆದರಿಸಬಹುದು? ಯಾರಿಗೆ ಯಾವ ಭೂತದ ವೇಷ ಒಪ್ಪುತ್ತದೆ? ತಮ್ಮ ಮನೆಯನ್ನು `ಭೂತ್ ಬಂಗ್ಲಾ‘ ಮಾಡಲು ಇನ್ನೂ ಏನೇನು ಬೇಕು? [...]
Archive for October, 2007
ಬೆದರು-ಬೊಂಬೆಯಾಟವಯ್ಯಾ!
Posted in festival on October 17, 2007 | 1 Comment »
ಬಸ್ ಬಂತ್ ಬಸ್!
Posted in travell on October 9, 2007 | 1 Comment »
ಚಿಕ್ಕಂದಿನಲ್ಲಿ ‘ಬಸ್ ಬಂತ್ ಬಸ್…’ ಎಂದು ಹಾಡುತ್ತಿದ್ದಾಗ ಬಸ್ಸಿನ ಪ್ರಯಾಣದ ಬಗ್ಗೆ ಸಿಕ್ಕಾಪಟ್ಟೆ ಕಲ್ಪನೆಗಳೇನೂ ಇರಲಿಲ್ಲ. ಜನರನ್ನು ಕರೆದೊಯ್ಯುವ ಕೆಂಪು-ಬಿಳಿ ಮೋಟಾರು, ನಾವು ಕಾದರೆ ಬಾರದಿರುವ ಮತ್ತು ನಾವು ಕಿಂಚಿತ್ ತಡವಾಗಿ ಬಂದರೂ ನಮ್ಮನ್ನು ಬಿಟ್ಟು ಹೋಗುವ ಮೋಟಾರು ಎಂಬುದಷ್ಟೇ ಅರಿವಿಗೆ ಬರುತ್ತಿತ್ತು. ಜನರನ್ನು ಕರೆದೊಯ್ಯುವ ವಾಹನ ಎಂಬ ಮೂಲ ಕಲ್ಪನೆ ಕ್ರಮೇಣ ವಿಸ್ತಾರಗೊಂಡು, ನಾವು ಹತ್ತುವ ನಿಲ್ದಾಣಕ್ಕೆ ಬರುವಾಗ ಯಾವಾಗಲೂ ತುಂಬಿರುವ ಬಸ್ಸು, ನಾವು ನಿಲ್ದಾಣದಲ್ಲಿ ನಿಂತಿದ್ದರೆ ನಮ್ಮಿಂದ ಮಾರು ದೂರ ಹೋಗಿ ನಿಲ್ಲುವ ಬಸ್ಸು, ನಾವು ಅವಸರದಲ್ಲಿದ್ದಾಗಲೇ ತಡವಾಗಿ ಬರುವ ಬಸ್ಸು, ಮದುವೆಗೊ, [...]