ಆ ದಿನವೇ ನನ್ನ ಸ್ಕೂಟಿ ಕೈಕೊಟ್ಟಿತ್ತು. ಹಾಳಾದ್ದು! ತೀರಾ ಅಗತ್ಯವಾದ ಕೆಲಸ ಇರುವಾಗಲೇ ಇದಕ್ಕೆ ರೋಗ ಬರಬೇಕೆ ಎಂದು ಬೈಯುತ್ತಾ ಗಾಡಿಯನ್ನು ಗಾರೇಜಿನೆದುರು ನಿಲ್ಲಿಸಿ, ಜತೆಯಲ್ಲಿರುವ ಅಮ್ಮನೊಟ್ಟಿಗೆ ಆಟೋಗೆ ಕೈ ಮಾಡುತ್ತಿದ್ದೆ. ಮಲ್ಲೇಶ್ವರದಿಂದ ಚಾಮರಾಜಪೇಟೆಗೆ ಬರಲು ನೂರೆಂಟು ತಕರಾರು ಮಾಡುತ್ತಿದ್ದ ಆಟೋದವರಿಗೂ ಒಂದಿಷ್ಟು ಶಾಪ ಹಾಕುತ್ತಿದ್ದೆ. ಅಂತೂ ಒಬ್ಬ ಪುಣ್ಯಾತ್ಮ ಚಾಮರಾಜಪೇಟೆಗೆ ಬರಲು ಒಪ್ಪಿದ. ಅಷ್ಟರಲ್ಲೇ ಓಡೋಡಿ ಬಂದ ಆಕೆ `ಜಯನಗರಕ್ಕೆ ಬರುತ್ತೀರಾ?’ ಎಂದು ಕೇಳಿದರು.
ಚಾಮರಾಜಪೇಟೆಗೆ ಬರುತ್ತೇನೆಂದು ಒಪ್ಪಿಕೊಂಡ ಮೇಲೆ ಈಗ ಇಲ್ಲ ಎನ್ನಲಾಗದೆ, ಹಾಗೆಂದು ಜಯನಗರಕ್ಕೆ [...]
Archive for November, 2007
ಜಯನಗರದ ಜನಜಂಗುಳಿಯಲ್ಲಿ ಮಾಯವಾದ ಭುವನೇಶ್ವರಿ
Posted in offbeat on November 14, 2007 | 1 Comment »
ಧರೆ ಹೊತ್ತಿ ಉರಿದಾಗ…
Posted in offbeat on November 1, 2007 | 1 Comment »
ಈ ಬಗ್ಗೆ ಓದಿದ್ದೆ, ಕೇಳಿದ್ದೆ. ಆದರೆ ಅನುಭವಿಸಿರಲಿಲ್ಲ! ಆ ನಡುಕ, ಝುಂ ಎನ್ನುವ ಕಂಪನ… ಇಡೀ ಮೈ ಅದುರಿದಂತಾಗುತ್ತದೆ. ಭೂಮಿಯೇ ತೂಗಾಡಿದಂತಾಗುತ್ತದೆ. ಮೂಲತಃ ಇದೇನು ಎಂಬುದು ಅರ್ಥವಾಗಲು ಕ್ಷಣಕಾಲ ಬೇಕು. ಅದೊಂಥರಾ ವಿಚಿತ್ರ ಅನುಭವ ಬಿಡಿ, ಹೇಳಿ ಸುಖವಿಲ್ಲ. ಅನುಭವಿಸಿದವರಿಗೇ ಗೊತ್ತು…
ಇದೆಂಥಾ ವಿಚಿತ್ರ ಸುಖ ಇರಬಹುದು ಎಂದೆಲ್ಲಾ ಇಲ್ಲಸಲ್ಲದ ಯೋಚನೆ ಮಾಡುತ್ತಿದ್ದರೆ ಕೊಂಚ ಬ್ರೇಕ್ ಹಾಕಿ… ಸುಖವೂ ಇಲ್ಲ, ಮಣ್ಣಂಗಟ್ಟಿಯೂ ಇಲ್ಲ. ಮಾರಾಯ್ರೆ, ನಾ ಹೇಳ್ತಿರೋದು ಭೂಕಂಪದ ಬಗ್ಗೆ! ಮೊದಲ ಬಾರಿಗೆ ಅಂಥಾ ಜೀವಭಯ ನನ್ನಲ್ಲಿ ಉಂಟಾಗಿತ್ತು [...]