(ಸಣ್ಣ ಕತೆ)
`ಏ… ಹಗ್ಗ,, ಕತ್ತೀನ ಮತ್ತೆ ಇಲ್ಲೇ ತಂದಿಡಾ…’ ಎಂಬ ನನ್ನ ಸೂಚನೆಗೆ ಸಣ್ಣದೊಂದು ಮುಗುಳ್ನಗೆ ಬೀರಿ, ಗೋಣಲ್ಲಾಡಿಸಿ ಮುನ್ನಡೆದ ಮನ್ನ. ಅವನ ಕಾರ್ಯಾಚರಣೆ ನಡೆಯುವುದೇ ಕತ್ತಲಾದ ಮೇಲೆ. ಅದೇನು ವೀರಪ್ಪನ್ ಹಿಡಿಯುವಂಥ ಮಹತ್ತರ ಕಾರ್ಯಾಚರಣೆಯಲ್ಲ, ಜೇನು ತೆಗೆಯುವುದಷ್ಟೇ. ನಮ್ಮೂರಲ್ಲಿ ಹಗಲು ಹೊತ್ತಿನಲ್ಲಿ ಜೇನು ತೆಗೆಯುವವರು ಯಾರೂ ಇಲ್ಲ. ಅಂದರೆ ರಾತ್ರಿ ತೆಗೆಯುವವರು ಬೇಕಷ್ಟಿದ್ದಾರೆ ಎಂದಲ್ಲ, ಎಲ್ಲೋ ಮನ್ನನಂಥ ಒಂದಿಬ್ಬರು ತೆಗೆಯುತ್ತಾರಷ್ಟೇ. ಅದರಲ್ಲೂ ಹೇಳಿದ ತಕ್ಷಣ ಮರುಮಾತಾಡದೆ ಜೇನು ತೆಗೆಯುವವನು ಮನ್ನ ಮಾತ್ರ. ಏಕೆಂದರೆ ಆತ ಮೂಕ! [...]
Archive for December, 2007
ಮನ್ನ
Posted in literature on December 31, 2007 | 1 Comment »
ಈಗ ಮಕ್ಕಳಿಗೆ ‘ಎಲ್ಲವೂ’ ದೊರೆಯುತ್ತದೆ!
Posted in Society on December 15, 2007 | 6 Comments »
ಆಕೆ ನಿಜಕ್ಕೂ ಚಡಪಡಿಸುತ್ತಿದ್ದಳು. ಒಂದು ವರ್ಷದ ಮಗುವಿನ ಜೊತೆ ಒಬ್ಬಳೇ ಭಾರತಕ್ಕೆ ಪ್ರಯಾಣಿಸುತ್ತಿದ್ದಾಳೆ, ಹಾಗಾಗಿ ಆತಂಕ ಇರಬಹುದು ಎಂದುಕೊಂಡೆ. ‘ಛೇ ಛೇ, ಹಾಗೇನಿಲ್ಲ‘ ಎಂದಳು. ಸಿಂಗಾಪುರದಲ್ಲಿ ಸುಮಾರು ಒಂಬತ್ತು ತಾಸುಗಳ ಬಿಡುವಿದೆಯಲ್ಲ, ಆಗ ಮಗುವನ್ನು ಹೇಗೆ ಸುಧಾರಿಸಬೇಕು ಎಂಬ ಚಿಂತೆಯಿರಬೇಕು ಎಂದುಕೊಂಡೆ. ‘ಅದೇನು ಸಮಸ್ಯೆಯಲ್ಲ‘ ಎಂದಳು. ಎಷ್ಟೆಂದರೂ ಪಕ್ಕದ ಮನೆಯ ಗೆಳತಿ, ನನ್ನಿಂದ ಏನಾದರೂ ಸಹಾಯ ಆದೀತೇನೊ ಎಂದು ಕೇಳಿದೆ- ‘ಏನು ನಿನ್ನ ಸಮಸ್ಯೆ?’
‘ಮಗು ಜೊತೆ ಮೊದಲ ಬಾರಿಗೆ ಭಾರತಕ್ಕೆ ಹೋಗ್ತಿದ್ದೀನಿ. ಎಲ್ಲಾರಿಗೂ ಒಳ್ಳೆಯ ಗಿಫ್ಟ್ ಕೊಡೋಣಾಂತಿದ್ದೆ. [...]