ಇತ್ತೀಚಿನದಲ್ಲ, ಸುಮಾರು ಇಪ್ಪತ್ತು ವರ್ಷದ ಹಿಂದಿನ ಮಾತು. ವಾರಕ್ಕೊಮ್ಮೆ ನಮ್ಮನೆಗೆ ತಪ್ಪದೆ ‘ತರಂಗ‘ ಬರುತ್ತಿತ್ತು. ಆಗಿನ್ನೂ ಅಂಗಳದಲ್ಲಿ ಮಣ್ಣಾಟ ಆಡಿಕೊಂಡಿದ್ದ ನಮಗೆ, ತರಂಗದಲ್ಲಿ ಬರುತ್ತಿದ್ದ ‘ಬಾಲವನ‘ ಅತ್ಯಂತ ಪ್ರಿಯವಾಗಿತ್ತು.
ಆ ದಿನ ಹೊಸ ತರಂಗ ಬರುತ್ತಿದ್ದಂತೆ ದೊಡ್ಡವರ ಕೈಗೆ ಸಿಗುವ ಮೊದಲೇ ನಾವಿಬ್ಬರು (ನಾನು, ನನ್ನತ್ತೆ ಮಗಳು) ಎಳೆದಾಡುತ್ತಿದ್ದೆವು. ನನಗಿಂತ ಅವಳು ಕೊಂಚ ದೊಡ್ಡವಳೂ ಬಲಶಾಲಿಯೂ ಆದ್ದರಿಂದ ಪುಸ್ತಕ ಅವಳ ಕೈಗೆ (ಹರಿಯದೆ ಇಡಿಯಾಗಿಯೇ) ಹೋಯಿತು. ಬಾಲವನ ತೆಗೆದ ಅವಳು ‘ನಿಮ್ಮಜ್ಜಿ ನಿಂಗೆ ಪತ್ರ ಬರೆದಿದ್ದಾರೆ ನೋಡೆ‘ ಎಂದು [...]
Archive for February, 2008
ನಮ್ಮಜ್ಜಿ ಪತ್ರ!
Posted in down the memory lane on February 28, 2008 | 8 Comments »
ಕನ್ನಡಿ ಹೇಳಿದ ಸತ್ಯ
Posted in Society, offbeat on February 22, 2008 | 5 Comments »
ಹಿಮಶ್ವೇತೆಯ (ಸ್ನೋ ವೈಟ್) ಕಥೆಯ ಅಂತ್ಯದಲ್ಲಿ, ಆಕೆಯ ಮಲತಾಯಿ ಆ ಕನ್ನಡಿಯನ್ನು ಅಷ್ಟೇಕೆ ದ್ವೇಷಿಸಿದಳು ಎಂಬುದು ನನಗೀಗ ಅರ್ಥವಾಗುತ್ತಿದೆ.
ನನ್ನ ಕನ್ನಡಿ ನನ್ನನ್ನು ಯಾವತ್ತೂ ಪ್ರಪಂಚದಲ್ಲಿ ನೀನೇ ಸುಂದರಿ ಎಂದು ಹೇಳಿರಲಿಲ್ಲ; ನಿನಗಿಂತ ಹಿಮಶ್ವೇತೆ ಸುಂದರಿ ಎಂದೂ ಹೇಳಿರಲಿಲ್ಲ. ಆದರೆ ನೀ ಕುರೂಪಿಯಲ್ಲ ಎಂದು ಸಮಾಧಾನ ಹೇಳುತ್ತಿತ್ತು; ಪ್ರಕೃತಿ ನಿನಗೇನೂ ತಾರತಮ್ಯ ಮಾಡಿಲ್ಲ ಎಂಬ ವಿಶ್ವಾಸ ತುಂಬುತ್ತಿತ್ತು. ನೂರಾರು ಜಾಹೀರಾತುಗಳಲ್ಲಿ ಬರುವಂಥ ನುಣುಪಾದ ಕೆನ್ನೆ, ಕಪ್ಪು-ದಟ್ಟ ಮುಂಗುರುಳು, ಜೋಡಿಸಿಟ್ಟಂತಹ ದಂತಪಂಕ್ತಿ, ಕೆತ್ತಿಟ್ಟಂತಹ ಹುಬ್ಬು, ತಿದ್ದಿ-ತೀಡಿದ ಕಣ್ಣುಗಳು ಇವ್ಯಾವುದೂ [...]