Feeds:
Posts
Comments

Archive for March, 2008

ಹಾಗೆ ನೋಡಿದರೆ ದೊಡ್ಡಪ್ಪ ಕಂಜೂಸಿಯೇನಲ್ಲ. ಆದರೆ ಜಿಗುಟು ಸ್ವಭಾವದಿಂದಾಗಿ ಕೆಲವು ವಿಷಯಗಳಲ್ಲಿ ತಮ್ಮ ಪಟ್ಟು ಸಡಿಲಿಸುತ್ತಿರಲಿಲ್ಲ. ಈಗ ಶ್ರೀಕಾಂತನ ಮಾತಿಗೆ ಮೆದುವಾಗುತ್ತಿದ್ದುದನ್ನು ಕಂಡು ಅವರ ಮೊದಲ ಮಗ ಶ್ರೀನಿವಾಸ ಸೆಟೆದುಕೊಂಡಿದ್ದ. ಮನೆಯಲ್ಲಿ ಕೃಷಿ ಮಾಡಿಕೊಂಡಿರುವ ಹುಡುಗರಿಗೆ ವಧು ಸಿಗುವುದೇ ಕಷ್ಟವಾಗಿ, ಇದರ ಬಿಸಿ ಶ್ರೀನಿವಾಸನನ್ನೂ ತಟ್ಟಿತ್ತು. ಮೂವತ್ತಾದ ತಾನು ಮನೆಯಲ್ಲಿದ್ದರೂ, ಇಪ್ಪತ್ತೈದರ ಸಾಫ್ಟ್ ವೇರ್ ತಮ್ಮನಿಗೆ ಜನ ಜಾತಕ ಕೊಡಲು ಮುಂದಾದಾಗ ಕೊಂಚ ಅಧೀರನಾಗಿದ್ದ. ಮನೆಯಲ್ಲಿದ್ದರೂ ಅಡ್ಡಿಯಿಲ್ಲ ಎಂದು ಅಪರೂಪಕ್ಕೆ ಮುಂದಾಗುವ ಕನ್ಯಾಪಿತರು ನಮ್ಮನೆಯಲ್ಲಿ ಮೂಲಸೌಕರ್ಯವೇ ಇಲ್ಲದ್ದನ್ನು [...]

Read Full Post »

‘ಅದು ಹೆಸರಿಗಷ್ಟೇ ಅಮೆರಿಕಾ. ಅಲ್ಲೆಲ್ಲಾ ಅಮೆರಿಕದ್ದು ಎಂತದೂ ಸಿಕ್ತಿಲ್ಲೆ. ಎಲ್ಲವೂ ಚೀನಾ, ಕೊರಿಯಾ, ಮಲೇಷ್ಯಾ, ಭಾರತ, ಶ್ರೀಲಂಕದ್ದೇಯ…’ ಜಗುಲಿಯ ಮೇಲೆ ಕೂತು ಕವಳ ಹಾಕುತ್ತಿದ್ದ ದೊಡ್ಡಪ್ಪ ಆಚೀಚೆ ಮನೆಯ ವಾರಿಗೆಯ ದೋಸ್ತರೊಂದಿಗೆ ದೊಡ್ಡ ದನಿಯಲ್ಲಿ ಪಟ್ಟಾಂಗ ಹೊಡೆಯುತ್ತಿದ್ದರು. ‘ಉಡಲ್ಲೆ-ತೊಡಲ್ಲೆ ಚೀನಾದ ವಸ್ತ್ರ, ಹಾಸಲ್ಲೆ-ಹೊದಿಯಲ್ಲೆ ಕೊರಿಯಾದ ಬಟ್ಟೆ, ಉಂಬಲ್ಲೆ-ತಿಂಬಲ್ಲೆ ಹೋದ್ರೂ ಬೇರೆ ದೇಶದಲ್ಲಿ ಬೆಳೆದಿದ್ದೇ ಸಿಕ್ತಡ. ಶೀತ-ಕೆಮ್ಮಿಗೆ ಔಷಧ ಬೇಕಂದ್ರೂ ಚೀನಾದಿಂದ್ಲೇ ಬರೋ ಅಂದ್ರೆ ಎಲ್ಲಿಗೆ ಬಂತು ಜಾಗತೀಕರಣ…’ ಸುದ್ದಿ ಬಿಗಿಯುವುದರಲ್ಲಿ ಸದಾ ಮುಂದೆಯೇ ಇದ್ದ ದೊಡ್ಡಪ್ಪ ಈಗಂತೂ [...]

Read Full Post »