Feeds:
Posts
Comments

Archive for April, 2008

ಮೊನ್ನೆ ಹಳೆ ದೋಸ್ತಿ ಸಿಕ್ಕಿದ್ದಳು. ವರ್ಷಗಟ್ಟಲೆ ಆಗಿತ್ತೇನೊ ನಾವಿಬ್ಬರೂ ಹರಟದೆ… ಹಿಂದಿನ ಬಾಕಿ ಚುಕ್ತಾ ಮಾಡುವಂತೆ ತಾಸುಗಟ್ಟಲೆ, ಕನಿಷ್ಠ ಒಂದು ದವಡೆ ಕರಗುವಷ್ಟಾದರೂ ಮಾತನಾಡಬೇಕೆಂದು ನಿಶ್ಚಯಿಸಿಕೊಂಡು ಶುರುಹಚ್ಚಿದೆ. ಹೈಸ್ಕೂಲಿನಿಂದಲೂ ಬಹಳ ವರ್ಷಗಳ ಕಾಲ ಒಟ್ಟಿಗೆ ಓದಿದ್ದ ನಾವು ಈಗ ನಾನೊಂದು ತೀರ ನೀನೊಂದು ತೀರ ಎಂಬಂತೆ ಆಗಿಬಿಟ್ಟಿದ್ದೇವೆ.
ಒಂಬತ್ತನೇ ಕ್ಲಾಸಿನಲ್ಲಿ ಇದ್ದಾಗ ಸೈಕಲ್ ಕಲಿಯಲು ಹೋಗಿ ಕಸದ ಬುಟ್ಟಿ ಕೆದರುತ್ತಿದ್ದ ದನಕ್ಕೆ ಗುದ್ದಿದ ಕತೆಯಿಂದ ಆರಂಭವಾದ ಸುದ್ದಿ ಎಲ್ಲೆಲ್ಲೋ ಹೋಯಿತು. ಪಿಯುಸಿಯಲ್ಲಿ ಹಿಂದಿನ ಬೆಂಚಿನಲ್ಲಿ ಕುಳಿತು ಕಿಚ್ಚಖಾರ ಹಚ್ಚಿದ [...]

Read Full Post »

ಎಲ್ಲರೂ ಅವನನ್ನು ಹಿಗ್ಗಾಮುಗ್ಗಾ ಹೊಗಳುತ್ತಿದ್ದರು. ಅವನ ಪಾಂಡಿತ್ಯವನ್ನು ಕಂಠಬಿರಿ ಪ್ರಶಂಶಿಸುತ್ತಿದ್ದರು. ಅವನಿಂದ ನಾವೆಲ್ಲಾ ಕಲಿತುಕೊಳ್ಳುವುದು ಏನೇನಿದೆ ಎಂದು ಹನುಮಂತನ ಬಾಲವೂ ನಾಚುವಂತಹ ಪಟ್ಟಿ ಮಾಡುತ್ತಿದ್ದರು.
ಗೊತ್ತಿದೆ! ಅಂವ ಯಾರು, ಏನು, ಎತ್ತ, ಅವನ ಪಾಂಡಿತ್ಯ ಎಂಥದ್ದು, ಎಷ್ಟೆಷ್ಟು ಭಾಷೆಗಳನ್ನು ಬಲ್ಲ, ಎಷ್ಟು ಧರ್ಮಗಳ ಮರ್ಮವನ್ನು ಅರೆದು ಕೊಡಿದವನು, ಯಾವ್ಯಾವ ಕ್ಷೇತ್ರಕ್ಕೆ ಎಂಥೆಂಥ ಕಾಣಿಕೆ ಕೊಟ್ಟವನು… ಇವೆಲ್ಲವುಗಳ ಬಗ್ಗೆ ವಿಪರೀತ ಅಲ್ಲದಿದ್ದರೂ ತಕ್ಕಮಟ್ಟಿನ ಜ್ಞಾನ ನನಗಿದೆ. ಆದರೆ ಮಾನವೀಯತೆಗೆ ‘ಎಂಥ ಭಾಷ್ಯ‘ ಬರೆದವ ಎಂಬುದನ್ನು ನಿಮ್ಮೊಂದಿಗೆ ಇಂದು ಹೇಳಿಕೊಳ್ಳಲೇಬೇಕಿದೆ.
ಅವಳೇನೂ ಅತಿಲೋಕ [...]

Read Full Post »