Feeds:
Posts
Comments

Archive for May, 2008

ಆ ದಿನ ಮೈಸೂರಿನ ಕಲಾಮಂದಿರದಲ್ಲಿ ಎನ್ಐಐಟಿಯ ‘ಅಫಿನಿಟಿ ಡೇ‘. ನೂರಾರು ಯುವಕ ಯುವತಿಯರು ಹುರುಪಿನಿಂದ ಸೇರಿದ್ದರು. ಸಂಜೆ ಇಳಿಯುತ್ತಿದ್ದಂತೆ ನೆರೆದವರ ಉತ್ಸಾಹ ಏರುತ್ತಿತ್ತು. ಯುವ ಜನತೆಯ ಅಭಿರುಚಿಗೆ ಹೊಂದುವಂತಹ ಕಾರ್ಯಕ್ರಮಗಳೇ ಹೆಚ್ಚಾಗಿದ್ದರಿಂದ ಸಂಜೆ ಕಳೆಕಟ್ಟಿತ್ತು. ಕೊನೆಯ ಕಾರ್ಯಕ್ರಮದಲ್ಲಿ ‘Jewel Thief’ ಚಿತ್ರದಲ್ಲಿ ವೈಜಯಂತಿ ಮಾಲಾಳ ಧಿರಿಸಿನಲ್ಲಿದ್ದ ಆಕೆ ‘ಹೋಟೋಂಪೆ ಐಸಿ ಬಾತ್ ಮೆ ದಬಾಕೆ ಚಲಿ ಆಯಿ…’ ಹಾಡಿಗೆ ಹೆಜ್ಜೆ ಹಾಕುತ್ತಿದ್ದಳು.
ಈ ಕಾರ್ಯಕ್ರಮಕ್ಕಾಗಿ ನಮ್ಮ ತಂಡದಲ್ಲಿ ಒಂದಾಗಿ ಅಭ್ಯಾಸ ನಡೆಸಿದ, ಗ್ರೀನ್ ರೂಮಿನಲ್ಲಿ ಚುರುಕಾಗಿ ಓಡಾಡಿ [...]

Read Full Post »

ಬ್ಲಾಗ್ ಕಡೆ ತಲೆ ಹಾಕಿ ಮಲಗದೆ ವಾರಗಟ್ಟಲೆ ಆಗಿಬಿಟ್ಟಿತ್ತು. ಅಸಲಿಗೆ ಸರಿಯಾಗಿ ನಿದ್ದೆಯನ್ನೇ ಮಾಡದೆ ವಾರಗಟ್ಟಲೆ ಆಗಿದೇಂದ್ರೂ ತಪ್ಪಲ್ಲ. ಕಣ್ಣು ಮುಚ್ಚಿದರೆ ಹತ್ತಿಪ್ಪತ್ತು ವಾರೆ ಗೆರೆಗಳ ಗೂಗಲ್ ಮ್ಯಾಪು, ಒಂದಿಷ್ಟು ಅಪಾರ್ಟ್ಮೆಂಟು/ಮನೆಗಳ ಪಟ್ಟಿ, ಹಿಂದು-ಮುಂದಿಲ್ಲದ ಒಂದಿಷ್ಟು ಫೋನ್ ನಂಬರುಗಳು ಬಿಡದೆ ಕಾಡುತ್ತಿವೆ. ಸಾಮಾನ್ಯವಾಗಿ ರಾತ್ರಿಯಿಡೀ ‘ಒಂದೇ‘ ನಿದ್ದೆ ಮಾಡುವ ನನಗೆ ಹೀಗೆ ನಿದ್ದೆಯಿಲ್ಲದೆ ಹೊರಳಾಡುವುದು, ಎದ್ದು ಕತ್ತಲಲ್ಲೇ ಓಡಾಡುವುದು ಜನ್ಮಕ್ಕೇ ಬಂದಿದ್ದಲ್ಲ. ಎಂಥಾ ಘೋರ ಪರೀಕ್ಷೆಯ ದಿನಗಳಲ್ಲೂ ನಿದ್ದೆ ನನ್ನ ಕಣ್ಣು ಬಿಟ್ಟಿರಲಿಲ್ಲ. ಈಗ…
ನನ್ನ ನಿದ್ರಾ ಸಮೀಕರಣ [...]

Read Full Post »