Feeds:
Posts
Comments

Archive for the ‘festival’ Category

 

ಸಂಕ್ರಾಂತಿಯ ಶುಭಾಶಯ ಪತ್ರಗಳನ್ನು ಕಳುಹಿಸುವಾಗ ಒಳಗೊಂದಿಷ್ಟು ಅಚ್ಚಳಿಯದ ಬೆಚ್ಚನೆಯ ಸಾಲುಗಳಿರುತ್ತವೆ. ಆದರೆ ಈಗೀಗ ಶುಭಾಶಯ ಪತ್ರಗಳನ್ನು ಕಳುಹಿಸುವ ಪರಿಪಾಠವೇ ದೂರವಾಗಿರುವುದರಿಂದ ಈ ಮನಮುಟ್ಟುವ ಮಾತುಗಳೂ ಮಾಯವಾಗಿವೆ. ಆದರೂ, ನೆನಪಿದ ಭಂಡಾರ ತೆರೆದಾಗ ಸಿಕ್ಕಿದ್ದಿಷ್ಟು. ನಿಮ್ಮಲ್ಲೂ ಇಂತಹ ಸಾಲುಗಳಿದ್ದರೆ ಖಂಡಿತ ಸೇರಿಸಿ…

ಅಕ್ಕರೆಗೆ ಸಕ್ಕರೆಯು ಸ್ನೇಹಕ್ಕೆ ಎಳ್ಳು
ಪ್ರೀತಿಯ ವೃದ್ಧಿಗೆ ಶುಭಾಶಯಗಳ ಕೊಡಕೊಳ್ಳು
–***–
ಇಕೋ ಎಳ್ಳು, ಇಕೋ ಬೆಲ್ಲ
ಸಂಕ್ರಮಣದ ಶುಭದಿನ
ಎಳ್ಳು-ಬೆಲ್ಲದಂತೆ ಬಾಳುವೆವು
ಇದೇ ನಮ್ಮ ಪಣ
–***–
ಎಳ್ಳು ಬೆಲ್ಲದ ಸವಿಯನೆಲ್ಲ
ಒಲವಿನಲ್ಲಿ ಬೆರೆಸಲಿ
ನೂರು ಕಾಲ ನಮ್ಮನೆಲ್ಲ
ನೈಜ ಸುಖದಿ ಇರಿಸಲಿ
–***–
ಮಾತಿನಂತೆ ಮನವಿರಲಿ
ನುಡಿಯಂತೆ ನಡೆಯಿರಲಿ
ಎಳ್ಳು-ಬೆಲ್ಲ [...]

Read Full Post »

ಈಗಂತು ಅಮೆರಿಕದ ಯಾವ ಅಂಗಡಿಗೆ ಹೋದರೂ ಒಂದಿಷ್ಟು ತಲೆಬುರುಡೆ, ಅಸ್ಥಿಪಂಜರ (ನಿಜವಾದ್ದಲ್ಲ ಬಿಡಿ), ಪ್ರೇತ-ಪಿಶಾಚಿಯ ವೇಷಗಳು, ಬೃಹದಾಕಾರದ ಕುಂಬಳಕಾಯಿಗಳು, ದಿಗುಲುಗೊಳಿಸುವ ಮುಖವಾಡಗಳು, `ಗುಮ್ಮ‘ನಂತೆ ಕೂಗಿ ಹೆದರಿಸುವ ಚಿತ್ರ-ವಿಚಿತ್ರ ರೂಪಿ ಬೊಂಬೆಗಳು (ಗುಮ್ಮ ಕೂಗಿದ್ದನ್ನು ಕೇಳಿಲ್ಲ ಎನ್ನುವುದು ಬೇರೆ ಮಾತು!) ಕಾಣುತ್ತವೆ.
ಈ `ಭೂತಚೇಷ್ಟೆ‘ಯೆಲ್ಲಾ ಹಾಲೊವೀನ್ ಹಬ್ಬಕ್ಕಾಗಿ. ಅಕ್ಟೋಬರ್ 31ರ ಹಾಲೊವೀನ್ ಪಾರ್ಟಿಗಾಗಿ ಏನೆಲ್ಲಾ ಕುಚೇಷ್ಟೆಗಳನ್ನು ಮಾಡಬಹುದು? ಯಾರನ್ನು ಹೇಗೆ ಹೆದರಿಸಬಹುದು? ಯಾರಿಗೆ ಯಾವ ಭೂತದ ವೇಷ ಒಪ್ಪುತ್ತದೆ? ತಮ್ಮ ಮನೆಯನ್ನು `ಭೂತ್ ಬಂಗ್ಲಾ‘ ಮಾಡಲು ಇನ್ನೂ ಏನೇನು ಬೇಕು? [...]

Read Full Post »