Feeds:
ಲೇಖನಗಳು
ಟಿಪ್ಪಣಿಗಳು

Archive for ಡಿಸೆಂಬರ್, 2007

ಮನ್ನ

(ಸಣ್ಣ ಕತೆ)

`ಹಗ್ಗ,, ಕತ್ತೀನ ಮತ್ತೆ ಇಲ್ಲೇ ತಂದಿಡಾ…’ ಎಂಬ ನನ್ನ ಸೂಚನೆಗೆ ಸಣ್ಣದೊಂದು ಮುಗುಳ್ನಗೆ ಬೀರಿ, ಗೋಣಲ್ಲಾಡಿಸಿ ಮುನ್ನಡೆದ ಮನ್ನ. ಅವನ ಕಾರ್ಯಾಚರಣೆ ನಡೆಯುವುದೇ ಕತ್ತಲಾದ ಮೇಲೆ. ಅದೇನು ವೀರಪ್ಪನ್ ಹಿಡಿಯುವಂಥ ಮಹತ್ತರ ಕಾರ್ಯಾಚರಣೆಯಲ್ಲ, ಜೇನು ತೆಗೆಯುವುದಷ್ಟೇ. ನಮ್ಮೂರಲ್ಲಿ ಹಗಲು ಹೊತ್ತಿನಲ್ಲಿ ಜೇನು ತೆಗೆಯುವವರು ಯಾರೂ ಇಲ್ಲ. ಅಂದರೆ ರಾತ್ರಿ ತೆಗೆಯುವವರು ಬೇಕಷ್ಟಿದ್ದಾರೆ ಎಂದಲ್ಲ, ಎಲ್ಲೋ ಮನ್ನನಂಥ ಒಂದಿಬ್ಬರು ತೆಗೆಯುತ್ತಾರಷ್ಟೇ. ಅದರಲ್ಲೂ ಹೇಳಿದ ತಕ್ಷಣ ಮರುಮಾತಾಡದೆ ಜೇನು ತೆಗೆಯುವವನು ಮನ್ನ ಮಾತ್ರ. ಏಕೆಂದರೆ ಆತ ಮೂಕ!

ಆತನ ಹೆಸರೇನು ಎಂಬುದು ಯಾರಿಗೂ ಗೊತ್ತಿಲ್ಲ. ಊರು ತುದಿಗಿರುವ ಒಡ್ಡರ ಕೇರಿಗೆ ಆತ ಸೇರಿದ್ದ ಹೇಗೆ ಎಂಬುದು ಯಾರಿಗೂ ನೆನಪಿಲ್ಲ. ಊರಲ್ಲಿ ಯಾರು ಕರೆದರೂ ಅವರ ಮನೆ ಕೆಲಸ ಮಾಡುವ ಆತನಿಗೆ ಊರೊಟ್ಟಿನ ಹೆಸರುಮನ್ನ‘. ಮಲೆನಾಡಿನ ಬಹಳಷ್ಟು ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುವ ಆತ ಮರ ಹತ್ತಿ ಕರಡಿಯಂತೆ ಜೇನು ತೆಗೆಯುವುದಲ್ಲಿ ನಿಸ್ಸೀಮ. ಶಾಲೆ ಕಾಣದಿದ್ದರೂ, ಮಾತು ಬಾರದಿದ್ದರೂ ತನ್ನ ಮುಗ್ಧ ಕಣ್ಣುಗಳಲ್ಲೇ ಬಹಳಷ್ಟನ್ನು ಹೇಳಿಬಿಡುವ ಜಾಣ. ನಮ್ಮನೆಯಿಂದ ಅಜಮಾಸು ಒಂದೂವರೆ ಮೈಲು ದೂರದಲ್ಲಿರುವ ಬೃಹತ್ ತಾರೆ ಮರದಲ್ಲಿ ಹೆಜ್ಜೇನು ಗೂಡು ಕಟ್ಟಿದೆ ಎಂಬುದನ್ನು ಆತನೇ ನನಗೆ ತಿಳಿಸಿದ್ದ. ಬಸ್ ಸ್ಟಾಪಿನ ಪಕ್ಕದಲ್ಲಿ ರಸ್ತೆ ಅಂಚಿಗಿರುವ ಮರವಾದರೂ ಅದಕ್ಕೆ ಯಾರೂ ಕನ್ನ ಹಾಕಿರಲಿಲ್ಲ. ಹಾಕುವುದು ಸುಲಭವೂ ಇರಲಿಲ್ಲ ಬಿಡಿ, ಸಿಕ್ಕಾಪಟ್ಟೆ ದೊಡ್ಡ ಮರವದು. ಅದರಿಂದ ಜೇನುತುಪ್ಪ ತೆಗೆಯುವ ಕೆಲಸವನ್ನು ಆತನಿಗೇ ಗಂಟು ಹಾಕಿದ್ದರಿಂದ ಮನ್ನನ ಸವಾರಿ ನಮ್ಮನೆಗೆ ಬಂದಿತ್ತು. ಅಗತ್ಯ ಸರಂಜಾಮುಗಳನ್ನು ತೆಗೆದುಕೊಂಡು ಮನ್ನ ಮರೆಯಾಗುವ ಮುನ್ನವೇ, ಬೆಳಗ್ಗೆ ಸವಿಯಲಿರುವ ಹೆಜ್ಜೇನು ತುಪ್ಪದ ಪರಿಮಳ ನನ್ನ ಮೂಗಿಗೆ ಬರಲಾರಂಭಿಸಿತ್ತು!

************** ***************

ಜೇನು ರಟ್ಟಿನಿಂದ ತುಪ್ಪವನ್ನು ಹಿಂಡಿ ಸುರಿಯಲು ಸೂರ್ಯೋದಯದವರೆಗೆ ಕಾಯುವ ತಾಳ್ಮೆಯಿಲ್ಲದೆ ನಾನು ಚಟಪಡಿಸುತ್ತಿದ್ದೆ. ರಾತ್ರಿ ನಿದ್ದೆಯಲ್ಲೂ ಜೇನಿನ ಕನಸೇಒಮ್ಮೆ ನಾನು ಜೇನುತುಪ್ಪ ನೆಕ್ಕಿದಂತೆ, ಮತ್ತೊಮ್ಮೆ ಮನ್ನನಿಗೆ ಜೇನ್ನೊಣಗಳು ಕಚ್ಚಿದಂತೆ. ಅದು ಹಾಗೇ, ತುಪ್ಪ ತಿನ್ನುವುದು ಯಾರೇ ಆದರೂ ಜೇನು ಕಚ್ಚುವುದು ಮಾತ್ರ ಮನ್ನನಿಗೆ! ಆದರೆ ಬೆಳಗ್ಗೆ ನಮ್ಮನೆ ಕದ ತಟ್ಟಿದ್ದು ಜೇನು ತೆಗೆದ ಮನ್ನ ಅಲ್ಲ, ಕೆಟ್ಟದೊಂದು ಸುದ್ದಿನಮ್ಮೂರಿನ ಶ್ಯಾಮಲಾ ಕೊಲೆಯಾದಳಂತೆ! ಹಿಂದಿನ ದಿನ ಕಾಲೇಜಿನಿಂದ ಮರಳುವಾಗ ಆಕೆ ಬಸ್ ಇಳಿದಿದ್ದನ್ನು ಕೆರೆಹೊಂಡದ ರಾಮಣ್ಣ ನೋಡಿದ್ದಾನಂತೆ. ಆದರೆ ಮನೆ ತಲುಪಲೇ ಇಲ್ಲ. ಬಸ್ಸೇನು ಆಕೆಯ ಮನೆ ಬಾಗಿಲಿಗೆ ಬರುವುದಿಲ್ಲ ಬಿಡಿ, ಏಳೆಂಟು ಫರ್ಲಾಂಗು ದೂರದ ರಸ್ತೆಯಲ್ಲಿದೆ ಬಸ್ ಸ್ಟಾಪು. ಅಲ್ಲಿಂದ ಕಾಡು ದಾರಿಯಲ್ಲೇ ಅವರ ಮನೆ ತಲುಪಬೇಕು. ಅದೇನು ದೊಡ್ಡ ವಿಷಯವಲ್ಲ, ಮಲೆನಾಡಿನ ಮನೆ, ಅದರ ದಾರಿ ಎಲ್ಲವೂ ಇರುವುದು ಕಾಡಿನಲ್ಲೇ. ಆದರೆ ಇದೇನು ಪ್ರಾರಬ್ಧಕರ್ಮ?

ಸಂಜೆ ಐದು ಗಂಟೆಯ ಸಕ್ರೆಬೈಲಿನ ಬಸ್ಸಿಗೆ ಬರಬೇಕಿದ್ದ ಆಕೆ ಕತ್ತಲಾದರೂ ಬಾರದಿದ್ದಾಗ ಮನೆಯವರು ಹುಡುಕಾಟ ಆರಂಭಿಸಿದರಂತೆ, ಬಸ್ ಸ್ಟಾಪಿನಿಂದ ಕೊಂಚ ದೂರದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಪುಸ್ತಕಗಳು ಆಕೆಯ ದೇಹದ ಸುಳಿವು ನೀಡದವಂತೆ, ಕುತ್ತಿಗೆಯನ್ನು ಬಿಗಿಯಲಾಗಿದೆಯಂತೆ, ಮೈಮೇಲೆ ಆಳವಾದ ಗಾಯಗಳಿವೆಯಂತೆ, ಹಾಗಂತೆ, ಹೀಗಂತೆಊರೆಲ್ಲಾ ತಲ್ಲಣ. ಯಾರಡ? ಏನಡ? ಹ್ಯಾಂಗಡ?’ ಎಂಬ ಸರಪ್ರಶ್ನೆಗಳು;

ಅವುಗಳ ಬೆನ್ನಿಗೆಅಯ್ಯೋ, ಹಾಂಗಲ್ಲಯಂಗೊತ್ತಿದ್ದುಹೀಂಗಡ ಎಂಬ ಉತ್ತರಗಳು;

ಜೊತೆಗೆಛೇ, ಪಾಪ! ಗನಾ ಕೂಸು. ಹೀಂಗಾಗ್ತು ಹೇಳಿ ಕನ್ಮನ್ಸಲ್ಲೂ ಅಂದ್ಕಂಡಿದ್ನಿಲ್ಲೆಎಂಬ ಉದ್ಗಾರಗಳು;

ನಡುವೆಬಪ್ಪದು ಲೇಟಾಗ್ತು ಹೇಳಿ ಕೂಸು ಫೋನ್ ಮಾಡಿತ್ತಡ ಇಲ್ಯಡ, ಅವರ್ಮನೆ ಫೋನು ಹಾಳಾಗಿತ್ತಡ ಎಂಬ ಕಿಂವದಂತಿಗಳು ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ರೆಕ್ಕೆಪುಕ್ಕ ಕಟ್ಟಿ ಊರು ತುಂಬಾ ಹಾರಾಡಲಾರಂಭಿಸಿದ್ದವು. ನಮ್ಮೂರಿನ್ ಪಕ್ಕ ಹೆದ್ದಾರಿ ಮಾಡಿದಾಗ್ಲೇ ಹೇಳಿದ್ವಿಲ್ಯನಮ್ಮ್ ಉಪಕಾರಕ್ಕಿಂತ ಕಳ್ರು, ಸುಳ್ರಿಗೇ ಲಾಯ್ಕಾಗ್ತು ಹೇಳಿ. ಯಂತಾ ಅಭಿವೃದ್ಧಿಯೊ ಮಣ್ಣೋ ಸರಕಾರದ್ದುಈಗ್ನೋಡಿ! ಏನೇನೆಲ್ಲಾ ಆಗ್ತಿದ್ದುಎಂದು ಇತ್ತೀಚೆಗಷ್ಟೇ ಸೊಸೈಟಿ ನೌಕರಿಯಿಂದ ನಿವೃತ್ತರಾದ ಸುಬ್ಬಣ್ಣ ಸಿಡುಕಿದರು.

ಮೊದ್ಲಿನ್ಹಾಂಗೆ ಹತ್ತನೆಇಯತ್ತೆ ಆದ ಕೂಡ್ಲೆ ಹೆಣ್ಣು ಹುಡುಗ್ರ ಮದುವೆ ಮಾಡಿದ್ರೆ ಸರಿಯಾಗ್ತು. ಇವಕ್ಕೆಲ್ಲಾ ಕಾಲೇಜು ಕಲ್ತು ಎಲ್ಲಿ ಅಮಲ್ದಾರಿಕೆ ಮಾಡವ್ವು? ಕಲಿಗಾಲ…’ ಎಂದು ಎಂಬತ್ತು ತುಂಬಿದ ಯಮುನಜ್ಜಿ ಅಲವತ್ತುಕೊಂಡರು.

ಪೇಟೆಲ್ಲಿದ್ದ ಮನೆ, ಅಂಗ್ಡಿ ಎಲ್ಲಾ ಬಿಟ್ಟು ಇಲ್ಲಿ ಹಿಸ್ಸೆ ತಗಂಡ್ ಕುಂತಿದ್ದು ಯಾವ್ ಸೌಭಾಗ್ಯಕ್ಕೆ? ಇದ್ದೊಂದು ಬಂಗಾರ್ದಂತ ಮಗಳೂ ಅವ್ರ ಕೈತಪ್ಪಿ ಹೋತಲ್ಲಾಎಂದು ಶ್ಯಾಮಲಾಳ ಹೆತ್ತವರಿಗಾಗಿ ಹಲವರು ಹಲುಬಿದರು.

ಏನು ಹೇಳಿದರೇನು? ಶ್ಯಾಮಲಾ ಹೋಗಿಯಾಗಿತ್ತು. ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದರು.

*************************************

ಎಷ್ಟೇ ತನಿಖೆ ನಡೆಸಿದರೂ ಕೊಲೆಯಾಗಿ ವಾರ ಕಳೆದರು ಯಾರ ಬಂಧನವೂ ಆಗಲಿಲ್ಲ. ಊರಲ್ಲಿ ಇದ್ದಬಿದ್ದವರ ವಿಚಾರಣೆ ನಡೆಸಲಾಗಿತ್ತು. ಸಂಶಯ ಬಂದವರನ್ನೆಲ್ಲಾ ಪೊಲೀಸ್ ಠಾಣೆಗೆ ಕರೆಸಿವಿಚಾರಿಸಿಕೊಳ್ಳಲಾಗಿತ್ತು‘. ಕೊಲೆಗಾರನನ್ನು ಬಂಧಿಸಲೇಬೇಕೆಂದು ಜನರ ಮತ್ತು ಮಾಧ್ಯಮಗಳ ಒತ್ತಡದಿಂದ ತನಿಖೆ ತೀವ್ರವಾಗೇ ನಡೆಯುತ್ತಿತ್ತು. ಊರಿನವರು ಮಾತ್ರವಲ್ಲ, ಅವರ ನೆಂಟರಿಷ್ಟರ ವಿಚಾರಣೆಯೂ ಆರಂಭವಾಗಿತ್ತು. ಈಗಂತೂ ನಮ್ಮೂರಿಗೆ ಬರಲು ಪೇಟೆಯಲ್ಲಿದ್ದ ಆಟೋದವರು ಕಬೂಲಾಗುತ್ತಿರಲಿಲ್ಲ. ಬಸ್ಸಿನಲ್ಲಿ ನಮ್ಮೂರಿನ ಸ್ಟಾಪಿಗೆ ಟಿಕೆಟ್ ತೆಗೆದುಕೊಂಡವರನ್ನು ಯಾರೂ ಮಾತನಾಡಿಸುತ್ತಿರಲಿಲ್ಲ. ವಿಚಾರಣೆ ಭಯದಿಂದ ಯಾವ ಸಂಬಂಧಿಕರೂ ಬಾರದೆ ನಮ್ಮೂರು ಒಂಥರಾ ದ್ವೀಪದಂತಾಗಿಬಿಟ್ಟಿತ್ತು. ಮಲೆನಾಡಿನ ಮೂಲೆಯಲ್ಲಿ ಮುದುಡಿ ಕುಳಿತಿದ್ದ ಸಕ್ರೆಬೈಲು ಈಗ ಸುದ್ದಿಯ ಕೇಂದ್ರವಾಗಿತ್ತು.

ಇತ್ತ, ಶ್ಯಾಮಲಾಳ ವಾರಿಗೆಯ ಒಂದಿಬ್ಬರು ಹೆಣ್ಣುಮಕ್ಕಳು ಭಯದಿಂದ ಕಾಲೇಜು ಬಿಟ್ಟಿದ್ದರು. ‘ಯಮ್ಮನೆ ಕೂಸು ಓದಿದ್ದು ಸಾಕು. ಮುಂದಿನ ವರ್ಷನೇ ಜಾತ್ಕ ಹೊರಗೆ ಹಾಕ್ತ್ಯ ಎಂದು ಅವರ ಮನೆಯವರು ಘೋಷಿಸಿಯೂಬಿಟ್ಟರು. ನಮ್ಮೂರಲ್ಲಿ ಎಲ್ಲರ ಮನೆಗೂ ಇರುವುದು ಕಾಡು ದಾರಿಯೇ. ಬಸ್ಸಿಳಿದ ಮೇಲೆ ಅಷ್ಟಿಷ್ಟು ದೂರ ಒಂಟಿಯಾಗಿಯೇ ನಡೆಯಬೇಕು. ಆದರೂ ನಾಲ್ಕಾರು ದಿಟ್ಟೆಯರು ಓದು ಮುಂದುವರಿಸಿದರು. ಆದರೆ ಅವರಿಗಿದ್ದ ಧೈರ್ಯ ಅವರ ಪಾಲಕರಿಗೆ ಇಲ್ಲದಿದ್ದರಿಂದ, ದಿನಾ ಬಸ್ಸು ಬರುವ ಹೊತ್ತಿಗೆ ಹುಡುಗಿಯರ ಅಪ್ಪನೊ, ಅಣ್ಣನೊ, ತಮ್ಮನೊ ಬಸ್ ಸ್ಟಾಪಿಗೆ ಹಾಜರಾಗತೊಡಗಿದರು. ದಿನಾ ಬೆಳಗ್ಗೆ ಮತ್ತು ಸಂಜೆ ಅಲ್ಲೊಂದು ಸಣ್ಣ ಹರಟೆಕಟ್ಟೆಯೇ ಸೃಷ್ಟಿಯಾಯಿತು. ಕೊಲೆಗಾರ ಸಿಗದಿದ್ದರೂ, ಒಂದು ಪತ್ತೆದಾರಿ ಕಾದಂಬರಿಗೆ ಸಾಕಾಗುವಷ್ಟು ಕಾಲ್ಪನಿಕ ಸರಕು ಹರಟೆಕಟ್ಟೆಯಲ್ಲಿ ಸೃಷ್ಟಿಯಾಗುತ್ತಿತ್ತು.

ದಿನ ಸಂಜೆ ಇಲ್ಯಾವ್ದೊ ಬಿಳಿ ಕಾರು ಬಂದಿತ್ತಡ. ಈಗ ನೀ ನಿಂತಿದ್ದ ಜಾಗ ಇದ್ದಲ್ಲಾಸುಮಾರು ಹೊತ್ತು ಅಲ್ಲೇ ನಿಂತಿತ್ತಡ

ಅಲ್ಲಲ್ಲಬಿಳಿ ಕಾರಲ್ಲಕೆಂಪು ಇಂಡಿಕಾ ಕಾರಡ. ಪಕ್ಕದ ಹೆದ್ದಾರಿಯಲ್ಲಿ ಹೋಪ ಮೋಟರ್ ಸೈಕಲ್ಲಿನ ಜನ ಕಾರು ನೋಡಿದ್ವಡ. ನಾಲ್ಕೊ, ಎಂಟೊ ಜನ ಇದ್ದಿದ್ವಡ

ಕೊಲೆಯಾದ ವಾರದೊಳಗೇ ಯಾರನ್ನೋ ಬಂಧಿಸಿದ್ವಡ. ಆದರೆ ದಿಲ್ಲಿಯಿಂದ ಫೋನ್ ಬಂದ ಮೇಲೆ ಬಿಟ್ಟಿದ್ವಡ. ಅಂವ ಯಾರೋ ಭಾರಿ ದೊಡ್ಡ ಕುಳನಡ‘…

ಮಧ್ಯೆ ಕೊಲೆಗಾರನನ್ನು ಬಂಧಿಸಲಾಗಿದೆ ಎಂಬ ಸುದ್ದಿಯೂ ಬಂತು.

********************************************

ಶ್ಯಾಮಲಾ ಕೊಲೆ ಆಗಿದ್ದಕ್ಕಿಂತ ದೊಡ್ಡ ಸಂಚಲನವನ್ನು ಸುದ್ದಿ ಸೃಷ್ಟಿಸಿತ್ತು. ತಂಪಾಗಿದ್ದ ಜಾಗದಲ್ಲಿ ಪರಿ ಕಿಚ್ಚು ಹಚ್ಚಿದ್ದು ಯಾರು ಎಂಬ ಕುತೂಹಲ ಮೇರೆ ಮೀರಿತ್ತು. ಹೆಸರು, ಜಾತಿ, ಕುಲಗೋತ್ರ, ಬಣ್ಣ, ಉದ್ದ, ಅಗಲದಿಂದ ಹಿಡಿದು ಅವನ ಯೋಗ್ಯತೆ ಬಗ್ಗೆ ಸರ್ವರೂ ಮತ್ತ ಶಕ್ತ್ಯಾನುಸಾರ ವದಂತಿಗಳನ್ನು ಹಬ್ಬಿಸಿದರು. ಅವನ ಹೆಸ್ರು ಕೇಶವನಡಅಲ್ಲ, ಕಾಶಿಮನಡ…’

‘ಅವ್ನ ಕೆಲ್ಸ ಪ್ಯಾಟೆಲ್ಲಿ ಬಿಸಿನೆಸ್ಸಡಅಯ್ಯೋ ಅಲ್ಲ, ಸೋಪ್ಮಾರೋನಡ

ಥೋ ಥೋಅಂವ ಹಸೀ ಮೂರು ಕಾಸಿನವನಡ. ದಗಾಬಾಜಿ ಮಾಡ್ತಾನೆ ಇದ್ದವ ಹೇಳಾತು

ತಾನು ಅಲ್ಲವೇ ಅಲ್ಲ ಹೇಳಿದ್ನಡ, ಪೊಲೀಸರಿಂದ ಸರಿ ಖರ್ಚಿಗೆ ಸಿಕ್ಕಿದ್ಮೇಲೆ ಹೌದು ಹೇಳಿದ್ನಡ

‘ಎಲ್ಲಾ ಬಾಯಿ ಬಿಟ್ಟಿದ್ನಡಶ್ಯಾಮಲಾನ ಹಿಂದೆ ಬಿದ್ದು ಸುಮಾರು ದಿನ ಆಗಿತ್ತಡ. ಅದ್ನ ಕೊಂದ ಹಗ್ಗ, ಕತ್ತಿ ಎಲ್ಲಾ ಸಿಕ್ಕಿದ್ದಡ

ಮರುದಿನದ ಪತ್ರಿಕೆ ಬರುವುದರೊಳಗೆ ಸುದ್ದಿಯ ಚಂಡಮಾರುತವೇ ನಮ್ಮೂರನ್ನು ಹಾದುಹೋಗಿತ್ತು. ಯಾವುದು ಹೌದು, ಯಾವುದು ಅಲ್ಲ ಎಂಬುದೇ ತಿಳಿಯದಷ್ಟು ವದಂತಿಗಳು ತಿರುಗುತ್ತಿದ್ದವು. ಪತ್ರಿಕೆಯನ್ನು ಅವನ ಫೋಟೊ ಸಹ ಬಂದಿದೆ ಎಂಬುದನ್ನು ತಿಳಿದು ಲಗುಬಗೆಯಿಂದ ಪುಟ ಬಿಡಿಸಿದೆ.

ಪೊಲೀಸರ ನಡುವೆ ನಿಂತಿದ್ದ ಮನ್ನ! ಹಾಗಾದರೆ ಆತ ವಿಚಾರಣೆಯಲ್ಲಿ ಏನು ಹೇಳಿದ, ಹೇಗೆ ಹೇಳಿದ…? ಕಂಗಾಲಾಗಿ ಮತ್ತೆ ಮತ್ತೆ ಫೋಟೊ ನೋಡಿದೆಹೌದು, ಅವನೇ! ಅಸಹಾಯಕ ಮುಖ, ಅದೇನನ್ನೋ ಹೇಳಬೇಕೆಂದು ಚಡಪಡಿಸುತ್ತಿದ್ದ ಕಣ್ಣುಗಳು

(2007ರ ಕನ್ನಡಪ್ರಭ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟವಾದ ಕತೆ)

Read Full Post »

ಆಕೆ ನಿಜಕ್ಕೂ ಚಡಪಡಿಸುತ್ತಿದ್ದಳು. ಒಂದು ವರ್ಷದ ಮಗುವಿನ ಜೊತೆ ಒಬ್ಬಳೇ ಭಾರತಕ್ಕೆ ಪ್ರಯಾಣಿಸುತ್ತಿದ್ದಾಳೆ, ಹಾಗಾಗಿ ಆತಂಕ ಇರಬಹುದು ಎಂದುಕೊಂಡೆ. ‘ಛೇ ಛೇ, ಹಾಗೇನಿಲ್ಲ ಎಂದಳು. ಸಿಂಗಾಪುರದಲ್ಲಿ ಸುಮಾರು ಒಂಬತ್ತು ತಾಸುಗಳ ಬಿಡುವಿದೆಯಲ್ಲ, ಆಗ ಮಗುವನ್ನು ಹೇಗೆ ಸುಧಾರಿಸಬೇಕು ಎಂಬ ಚಿಂತೆಯಿರಬೇಕು ಎಂದುಕೊಂಡೆ. ‘ಅದೇನು ಸಮಸ್ಯೆಯಲ್ಲ ಎಂದಳು. ಎಷ್ಟೆಂದರೂ ಪಕ್ಕದ ಮನೆಯ ಗೆಳತಿ, ನನ್ನಿಂದ ಏನಾದರೂ ಸಹಾಯ ಆದೀತೇನೊ ಎಂದು ಕೇಳಿದೆ– ‘ಏನು ನಿನ್ನ ಸಮಸ್ಯೆ?’

ಮಗು ಜೊತೆ ಮೊದಲ ಬಾರಿಗೆ ಭಾರತಕ್ಕೆ ಹೋಗ್ತಿದ್ದೀನಿ. ಎಲ್ಲಾರಿಗೂ ಒಳ್ಳೆಯ ಗಿಫ್ಟ್ ಕೊಡೋಣಾಂತಿದ್ದೆ. ಆದರೆ ಯಾವುದನ್ನು ಖರೀದಿಸಿದರೂ ಇದೆಲ್ಲಾ ಭಾರತದಲ್ಲೇ ಸಿಗುತ್ತಲ್ಲವೇ ಅನ್ನಿಸುತ್ತಿದೆ. ಹೊರಡಲು ಇನ್ನೊಂದೇ ವಾರವಿದೆ. ಮಕ್ಕಳಿಗಂತೂ ಏನು ಕೊಡಲಿ ಎಂದೇ ತೋಚುತ್ತಿಲ್ಲ. ಅಲ್ಲಿ ಎಲ್ಲವೂ ದೊರೆಯುತ್ತದೆಎಂದು ತನ್ನ ಚಿಂತೆ ಬಿಚ್ಚಿಟ್ಟಳು. ಹೌದಲ್ಲವೇ! ಭಾರತದಲ್ಲಿ ಎಲ್ಲವೂ ಸಿಗುತ್ತದೆ. ಕೆಲವು ಎಲೆಕ್ಟ್ರಾನಿಕ್ ವಸ್ತುಗಳು ಅಮೆರಿಕದಲ್ಲಿ ಕೊಂಚ ಅಗ್ಗ ಎನ್ನುವುದನ್ನು ಬಿಟ್ಟರೆ, ಈಗ ನನ್ನ ದೇಶದಲ್ಲಿ ದೊರೆಯದ ವಸ್ತು ಯಾವುದಿದೆ ಎಂದು ಎದೆಯುಬ್ಬಿಸಿ ಕುಳಿತುಕೊಂಡೆ.

ನಾವು ಚಿಕ್ಕವರಿದ್ದಾಗ ಬಂಧುಮಿತ್ರರು ಯಾರಾದರೂ ಅಮೆರಿಕದಿಂದ ಬಂದರೆ ಅವರನ್ನು ನೋಡುವುದೇ ಸಂಭ್ರಮವಾಗಿತ್ತು. ಅವರು ಥೇಟ್ ನಮ್ಮಂತೆಯೇ ಉಳಿದಿದ್ದಾರೆ ಎಂಬುದನ್ನು ಖಾತ್ರಿ ಮಾಡಿಕೊಂಡ ಮೇಲೆ ಅವರು ತಂದ ನಾನಾ ರೀತಿಯ ಚಾಕೊಲೇಟ್ ಗಳತ್ತ ಗಮನ. ಅದೆಷ್ಟೊಂದು ರೀತಿಯ ಚಾಕೊಲೇಟ್ ಗಳು! ನಾನಾ ಆಕಾರದ, ರುಚಿಯ, ಬಣ್ಣದ ಕ್ಯಾಂಡಿಗಳು. ಸುಂದರವಾಗಿ ಮುದ್ರಿಸಿದ ಕತೆ ಪುಸ್ತಕಗಳು, ಮುಳ್ಳುಗಳಿಲ್ಲದ ಸಂಖ್ಯೆಯನ್ನಷ್ಟೇ ತೋರಿಸುವ ವಾಚು, ಮಾತನಾಡುವ ಅಲಾರಂ, ಪೆನ್ನುಪೆನ್ಸಿಲ್ಲುಗಳು, ಅಪರೂಪಕ್ಕೊಮ್ಮೆ ದೊರೆಯುತ್ತಿದ್ದ ಬಣ್ಣದ ಬಟನ್ ಕೊಡೆಯೊ ಅಥವಾ ವೀಡಿಯೊ ಗೇಮೊ

ನಮಗಲ್ಲದಿದ್ದರೆ ಬೇಡ. ಪಕ್ಕದ ಮನೆಯ ಪದ್ಮನಿಗೊ, ಹಿಂದಿನ ಮನೆಯ ಹೇಮನಿಗೊ ಯಾರಾದರೂ ಅಮೆರಿಕದಿಂದ ಆಟಿಕೆಗಳನ್ನು ತಂದರೂ ಸಾಕು, ನಮ್ಮ ಕಾಲು ಮನೆಯಲ್ಲಿ ನಿಲ್ಲುತ್ತಿರಲಿಲ್ಲ. ಶಾಲೆಯಲ್ಲಿ ಶಾಲಿನಿಗೊ, ಮಾಲಿನಿಗೊ ಅಮೆರಿಕದಿಂದ ಆಟಿಕೆ ಬಂದರೂ ಸರಿಯೆ, ತರಗತಿಗೆ ತಂದು ತೋರಿಸುವವರೆಗೆ ಬಿಡುತ್ತಿರಲಿಲ್ಲ. ಒಟ್ಟಿನಲ್ಲಿ ಅಮೆರಿಕದಿಂದ ಬರುವ ವಸ್ತುಗಳೆಂದರೆ ಅದೇನೊ ಆಕರ್ಷಣೆ.

ಆದರೀಗ ಬಿಗ್ ಬಝಾರಿಗೊ, ಫೋರಮ್ಮಿಗೊ, ನೀಲ್ಗಿರೀಸಿಗೊ ಅಥವಾ ಆಯಾ ಊರಿನ ಯಾವುದಾದರೂ ದೊಡ್ಡ ಮಾಲ್ಗೆ ಹೋದರೆ ಯಾವ ರೀತಿಯ ಕ್ಯಾಂಡಿ, ಚಾಕೊಲೇಟ್ ಬೇಕೊ ಎಲ್ಲವೂ ಲಭ್ಯ. ಕತೆ ಪುಸ್ತಕಗಳಂತೂ ಕೇಳಲೇಬೇಡಿ. ಪುಸ್ತಕದ ಜೊತೆ ಸಿಡಿ/ಡಿವಿಡಿಯೂ ಸಿಕ್ಕಿಬಿಡುತ್ತದೆ. ಇನ್ನು ಪೆನ್ನು, ಪೆನ್ಸಿಲ್ಲು, ವಾಚು, ವೀಡಿಯೊ ಗೇಮುಗಳತ್ತ ಮಕ್ಕಳೆಕ್ಯಾರೆಎನ್ನುವುದಿಲ್ಲ. ಮಾಲ್ಗಳಲ್ಲಿ ಹುಡುಕಿದರೆ ಸಿಗದಿರುವುದು ಯಾವುದೂ ಇಲ್ಲವೇನೊ, ಆದರೆ ನಾವು ಹೋಗಿ ಹುಡುಕಬೇಕಷ್ಟೆ. ಅದಕ್ಕೆ ಆರ್ಥಿಕ, ಜಾಗತಿಕ ಕಾರಣಗಳು ಏನೇ ಇರಲಿ, ಈಗಿನ ಮಕ್ಕಳಿಗೆ ಬೇಕಾದ್ದೆಲ್ಲವೂ ದೊರೆಯುತ್ತದೆ ಎಂಬ ಸಮಾಧಾನ ಮನದಲ್ಲಿ ಹಾದುಹೋಯಿತು.

ಗೆಳತಿ ಭಾರತಕ್ಕೆ ಹೋದ ಮೇಲೆ ಮಾತನಾಡಲೂ ಜೊತೆಯಿಲ್ಲದೆ ಬೇಸರವಾಗಿ ಟಿವಿ ಹಾಕಿದೆ. ಓಮಾಹಾ ಪ್ರಾಂತ್ಯದ ಶಾಪಿಂಗ್ ಮಾಲ್ ನಲ್ಲಿ ಯುವಕನೊಬ್ಬ ಮನಬಂದಂತೆ ಗುಂಡು ಹಾರಿಸಿ ಅಮಾಯಕರನ್ನು ಕೊಂದುಹಾಕಿದ ಸುದ್ದಿ ಬಿತ್ತರವಾಗುತ್ತಿತ್ತು. ‘ಛೇ, ಎಷ್ಟು ಮುಂದುವರಿದರೆ ತಾನೆ ಏನು ಬಂತು? ಮಕ್ಕಳನ್ನು ತಿದ್ದಿ ಬೆಳೆಸುವಂತಹ ಸಾಮಾಜಿಕ ವ್ಯವಸ್ಥೆ ಇಲ್ಲವಲ್ಲ. ತಪ್ಪು ಮಾಡಿದ ಮಕ್ಕಳಿಗೆ ಬೈಯುವುದೊ, ಒಂದೇಟು ಬಿಗಿಯುವುದೋ ಮಾಡಿದರೆ ಪೊಲೀಸರು ಮನೆ ಬಾಗಿಲಿಗೇ ಬಂದು ಬಿಡುತ್ತಾರೆ. ಹೀಗಾದರೆ ಮಕ್ಕಳನ್ನು ತಿದ್ದುವುದೆಲ್ಲಿ ಬಂತುಎಂದು ಮನಸ್ಸು ವ್ಯಾಕುಲಗೊಂಡಿತು. ಹಿಂದೊಮ್ಮೆ ಟೆಕ್ಸಾಸ್ ನಲ್ಲಿ ಇಂಥದ್ದೇ ಘಟನೆ ನಡೆದಿತ್ತು, ಆಮೇಲೆ ವರ್ಜೀನಿಯಾದಲ್ಲಿ, ಈಗ ಇಲ್ಲಿ. ಘಟನೆಗೊಂದಿಷ್ಟು, ಸಾಮಾಜಿಕ ಮತ್ತು ಮನೋವೈಜ್ಞಾನಿಕ ಕಾರಣಗಳನ್ನು ನೀಡಿ ತಿಪ್ಪೆ ಸಾರಿಸಬಹುದು. ಆದರೆ ಆಟಿಕೆಗಳಂತೆ ಶಸ್ತ್ರಗಳು ದೊರೆಯುವಾಗ, ಅದನ್ನು ಹಿಡಿಯುವ ಕೈಗಳು ಏನು, ಎಂಥವು ಎಂಬ ಹೊಣೆಗಾರಿಕೆ ಕಾನೂನಾದರೂ ಬೇಡವೆ? ಎಂದು ನನ್ನಷ್ಟಕ್ಕೇ ಬೈಯ್ದುಕೊಂಡೆ.

ಭಾರತಕ್ಕೆ ಹೋಗಿ ಎರಡು ವಾರಗಳ ಮೇಲೆ ಈಮೇಲ್ ಬರೆದಿದ್ದ ಗೆಳತಿ ಸಂಜೆ ಯಾಹೂ ಮೆಸ್ಸೆಂಜರ್ಗೆ ಬಾರೆ, ಸುಮಾರು ಮಾತನಾಡುವುದಿದೆ ಎಂದಿದ್ದಳು. ಸಂಜೆ ಅವಳಿಗಾಗಿ ಯಾಹೂದಲ್ಲಿ ಕಾಯುತ್ತಾ ibnlive.com ನೋಡುತ್ತಿದ್ದೆ. ದಿಲ್ಲಿಯ ಶಾಲೆಯಲ್ಲಿ ಬಾಲಕರಿಬ್ಬರು ಸಹಪಾಠಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದರೆಂಬ ಸುದ್ದಿಯಿತ್ತು. ಏನಾಯಿತು? ಏಕಾಯಿತು? ಹೇಗಾಯಿತು? ಅವರ ಕೈಗೆ ಶಸ್ತ್ರ ಎಲ್ಲಿಂದ ಬಂತು? ಎಲ್ಲಾ ವಿವರಗಳಿದ್ದವು. ಅಷ್ಟರಲ್ಲಿ ನನ್ನೊಂದಿಗೆ ವಾಯ್ಸ್ ಚಾಟ್ ಮಾಡಲು ಗೆಳತಿ ಪ್ರಯತ್ನಿಸುತ್ತಿದ್ದಾಳೆಂದು ಅರಿವಾಯಿತು. ಏನು ಮಾತನಾಡುವುದು ತಿಳಿಯದೆ ಸುಮ್ಮನೆ ಕೂತೆ. ಆಕೆಯದೇ ಮಾತು ಮತ್ತೆ ಮತ್ತೆ ನೆನಪಾಗುತ್ತಿತ್ತು.

ನಿಜ, ಈಗ ಮಕ್ಕಳಿಗೆ ಎಲ್ಲವೂ ದೊರೆಯುತ್ತದೆ. ‘ಎಲ್ಲವೂ ಎಂದರೆ…?

Read Full Post »