Feeds:
ಲೇಖನಗಳು
ಟಿಪ್ಪಣಿಗಳು

Archive for the ‘literature’ Category

ಅಂದು ಕಾವೇರಿದ ಚರ್ಚೆ ನಡೆದಿತ್ತು. `ಆತ್ಮಕಥೆಯಲ್ಲಿ ಎಷ್ಟು ಬಿಚ್ಚಿಡಬೇಕು? ಎಷ್ಟು ಮುಚ್ಚಿಡಬೇಕು?’ ಎನ್ನುವುದು ಒಂದು ಪ್ರಶ್ನೆಯಾದರೆ; `ಆತ್ಮಕಥೆ ಬರೆಯುವವರು ಪ್ರಾಮಾಣಿಕವಾಗಿ ಸ್ವಂತದ್ದನ್ನೂ ಅನಾವರಣ ಗೊಳಿಸುತ್ತಾರೆಯೇ?’ ಎನ್ನುವುದು ಇನ್ನೊಂದು ಪ್ರಶ್ನೆ. ಪ್ರತಿಯೊಬ್ಬರ ಬದುಕಿನೊಂದಿಗೆ ಇತರರ ಬದುಕಿನ ಎಳೆಯೂ ಸೇರಿರುವುದರಿಂದ ಎಲ್ಲವನ್ನೂ ಹೇಳಲಿಕ್ಕಾಗದು. ಯಾಕೆ? ಹೇಗೆ? ಎಷ್ಟು? ಎನ್ನುವ ಔಚಿತ್ಯವರಿತು ಆತ್ಮಕಥೆ ರಚನೆಗೊಳ್ಳಬೇಕು ಎಂಬಿತ್ಯಾದಿಯಾಗಿ ಗಹನ ಚರ್ಚೆ ನಡೆದಿತ್ತು. 2008ರ ಜನವರಿ 12 ಮತ್ತು 13ನೆಯ ದಿನಾಂಕಗಳಂದು ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿಗಳ ಸಹಯೋಗದಲ್ಲಿ ಮಂಗಳೂರಿನಲ್ಲಿಹಮ್ಮಿಕೊಂಡಿದ್ದ `ಮಹಿಳಾ ಆತ್ಮಕಥೆ’ ಕುರಿತ ವಿಚಾರ ಸಂಕಿರಣದಲ್ಲಿ ಈ ಬಗೆಯ ಜಿಜ್ಞಾಸೆ ನಡೆದಿತ್ತು. ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಪ್ರಕಟವಾಗಿರುವ ಮಹಿಳಾ ಆತ್ಮಕಥೆ ಗಳನ್ನು ಕುರಿತ ಚಿಂತನ ಮಂಥನದಲ್ಲಿ ಈ ರೀತಿಯ ಹಲವು ಬಗೆಯ ಅಭಿಪ್ರಾಯಗಳು ಹೊರಹೊಮ್ಮಿದ್ದವು.

      ಈಗ ಕೆಲವು ದಿನಗಳಿಂದ ಆತ್ಮಕಥೆಯನ್ನು ಕುರಿತಂತೆ ವಿಭಿನ್ನ ರೀತಿಯ ಚರ್ಚೆಗಳು, ಗದ್ದಲಗಳು ನಡೆಯುತ್ತಿವೆ. ಇವೆಲ್ಲವೂ ಪುರುಷ ರ ಆತ್ಮಕಥೆಗೆ ಸಂಬಂಧಿಸಿದವು. ಪುರುಷರ ಆತ್ಮಕಥೆಗಳು ಒಂದು `ಚರಿತ್ರೆ’ ಆಗುವಷ್ಟಿವೆ. ಆದರೆ ಕನ್ನಡದ ಸಂದರ್ಭದಲ್ಲಿ ನನ್ನ ಗಮನಕ್ಕೆ ಬಂದಿರುವಂತೆ 1977ರಲ್ಲಿ ಪ್ರಕಟವಾಗಿರುವ ವಾಸಂತಿ ಪಡುಕೋಣೆಯವರ ( ಹಿಂದಿಯ ಪ್ರಸಿದ್ಧ ಸಿನೆಮಾ ನಟ, ನಿರ್ದೇಶಕ ಗುರುದತ್ ಅವರ ತಾಯಿ ) ಕೃತಿ , ` `ಜೀವನ ಹೋರಾಟ ` ವೇ ಮೊದಲ ಮಹಿಳಾ ಆತ್ಮಕಥೆ. `ಈ ಗ್ರಂಥದಲ್ಲಿ ಬರುವ ವ್ಯಕ್ತಿಗಳ ಬಗ್ಗೆ ನನಗೆ ದ್ವೇಷವಾಗಲಿ, ಅಸೂಯೆಯಾಗಲಿ, ಯಾವುದೇ ರೀತಿಯ ಕಹಿ ಭಾವನೆಯಾಗಲಿ ನನ್ನಲ್ಲಿ ಇಲ್ಲ. ಅನುಭವಿಸಿದ್ದನ್ನು, ಕಂಡದ್ದನ್ನು, ನಡೆದದ್ದನ್ನು ಮುಚ್ಚುಮರೆ ಇಲ್ಲದೆ ಬರೆದಿದ್ದೇನೆ. ಇದು ಎಲ್ಲರ ಜೀವನದಲ್ಲೂ ನಡೆಯುವ ಘಟನೆಗಳೇ’ ಎನ್ನುವ `ನನ್ನ ಮಾತು’ ನಲ್ಲಿನ ಅವರ ಅಭಿಪ್ರಾಯ ಸರಿಯಾದುದೇ.

      ಆತ್ಮಕಥೆಯ ಬರಹಗಾರ್ತಿ/ರ ತಾನು ಲೋಕವನ್ನು ಕಂಡಂತೆ, ತನಗಾದ ಅನುಭವವನ್ನು, ತನ್ನ ಗ್ರಹಿಕೆಯನ್ನು ಅಲ್ಲಿ ದಾಖಲಿಸುತ್ತಾರೆ. ಅಲ್ಲಿನ ವಾಸ್ತವಿಕತೆ, ವಸ್ತುನಿಷ್ಠತೆ ಎಲ್ಲವೂ ಅವರ ದೃಷ್ಟಿಯದೇ ವಿನಾ ಲೋಕದ ದೃಷ್ಟಿಯದಲ್ಲ. ಆತ್ಮಕಥೆಯಲ್ಲಿ ಅನಾವರಣಗೊಳ್ಳುವ ನೋವು, ನಲಿವು, ರೋಚಕತೆ, ನಿಷ್ಠುರತೆ, ಅಭಿವ್ಯಕ್ತವಾಗುವ ಭಾವನೆಗಳು, ಎಲ್ಲವೂ ಆ ವ್ಯಕ್ತಿಯ ಅನುಭವಕ್ಕೆ ದಕ್ಕಿದ್ದು. ಅದು ಇತರರ ದೃಷ್ಟಿಯಲ್ಲಿ `ಇಷ್ಟೆನಾ?’ ಆಗಿರಬಹುದು, `ರೋಮಾಂಚನ’ದ್ದು ಆಗಿರಬಹುದು, ಸಮಾಜ `ಬೆಚ್ಚಿಬೀಳು’ವ ಸಂಗತಿಯೂ ಇರಬಹುದು. ಅವನ್ನೆಲ್ಲ ಅವೇ `ಬಣ್ಣ’ಗಳಲ್ಲಿ ಗ್ರಹಿಸಲು ಪ್ರಯತ್ನಿಸಬೇಕೇ ವಿನಾ ಅವುಗಳಿಗೆ ನಮ್ಮ `ಬಣ್ಣ’ ಕೊಡಬೇಕಿಲ್ಲ. ಆದರೆ ಇತ್ತೀಚೆಗೆ ಆತ್ಮಕಥೆ ಎಂದರೆ ಒಂದಿಷ್ಟು ಚರ್ಚೆ ಹುಟ್ಟಿಸುವ, ಗದ್ದಲ ಎಬ್ಬಿಸುವ ಸನ್ನಿವೇಶ ನಿರ್ಮಾಣವಾಗುತ್ತಿದೆ. ಆತ್ಮಕಥೆ ಬರೆಯುವುದು ಒಂದು ಖಯಾಲಿಯಾಗುತ್ತಿದೆಯೇ ಎನ್ನುವ ಸಂಶಯ ಮೂಡುತ್ತಿದೆ. ಆತ್ಮಕಥೆ ಬರೆಯುವಾಗ ತಮ್ಮ ಬದುಕಿನೊಂದಿಗೆ ಇತರರ ಬದುಕಿನ ಕೊಂಡಿ ಸೇರಿದ್ದರೆ ಅವರ ಒಪ್ಪಿಗೆ ಪಡೆದೇ ಆ ವಿಷಯವನ್ನು ಪ್ರಸ್ತಾಪಿಸಬೇಕೆನ್ನುವ ಅಭಿಪ್ರಾಯ ತಾರ್ಕಿಕವಲ್ಲ. ಹಾಗಿದ್ದರೆ ಗಾಂಧೀಜಿಯವರ ಆತ್ಮಕಥೆಯಲ್ಲಿ ಇಂಥ ಹಲವು ಪ್ರಸಂಗಗಳು ಕಾಣಬರುತ್ತವೆ. ಬದುಕಿನ ಒಂದು ಆಯಾಮವಾಗಿ ಸಂಗತಿಗಳನ್ನು ಗ್ರಹಿಸಬೇಕಾದ್ದು ಆರೋಗ್ಯಕರ ಮನಸ್ಸಿನ ಲಕ್ಷಣ. ಹಾಗೆಂದು ತನಗೆ ಸಂಬಂಧಪಡದ ವಿಷಯಗಳ ಪ್ರಸ್ತಾಪ ವೂ ಸುಸಂಗತವೆನಿಸದು.

      ಮಹಿಳೆಯ ಆತ್ಮಕಥೆಯ ವಿಷಯದಲ್ಲಿ ಕೆಲವರಿಗೆ ಕೆಟ್ಟ ಕುತೂಹಲ. ಆತ್ಮಕಥೆಯಲ್ಲಿ ಅವಳು ಎಷ್ಟು `ಬಿಚ್ಚಿಟ್ಟಿದ್ದಾಳೆ’ ಎನ್ನುವ ಕುತೂಹಲ, ಅಲ್ಲಿನ ವ್ಯಕ್ತಿಗಳೊಂದಿಗೆ ಆಕೆಯ ಸಂಬಂಧವನ್ನು ತಾಳೆ ನೋಡುವ ಕುತೂಹಲ, ಸಮಾಜನಿರ್ಮಿತ ಗೆರೆಯನ್ನು ದಾಟಿ ಆಕೆ ಬದುಕನ್ನು ತನ್ನಿಷ್ಟದಂತೆ ರೂಪಿಸಿಕೊಂಡಿದ್ದರೆ ಒಮ್ಮೆ `ಹಣಕಿಕ್ಕುವ’ ಉತ್ಸುಕತೆ. ಪ್ರಾಯಶಃ ಈ ಕಾರಣದಿಂದಲೇ ಇರಬಹುದು, `ಮಹಿಳೆ, ಪರಿಸರ ಸಾಹಿತ್ಯ’ ಎನ್ನುವ ಕಾರ್ಯಕ್ರಮವನ್ನು ಮೈಸೂರಿನಲ್ಲಿ ಹಮ್ಮಿಕೊಂಡಾಗ ಕೆಲವರು, `ಲೇಖಕಿಯರ ವೈಯಕ್ತಿಕ ಬದುಕನ್ನು ಯಾಕೆ ಎಲ್ಲರೆದುರು `ಬತ್ತಲು’ಗೊಳಿಸಲು ಹೊರಟಿದ್ದೀರಿ?’ ಎಂದು ಪ್ರಶ್ನಿಸಿದ್ದರು. ಮಹಿಳಾ ಆತ್ಮಕಥೆಯ ಮೂಲಕ ಮಹಿಳೆಯ ಬದುಕಿನ ಇಕ್ಕಟ್ಟನ್ನು ಸಮಾಜದೆದುರು ತೆರೆದಿಡುವುದು ಅದರ ಹಿಂದಿನ ಉದ್ದೇಶವಾಗಿತ್ತು.

      ಆತ್ಮಕಥೆ ಎಷ್ಟು ವೈಯಕ್ತಿಕವೋ ಅಷ್ಟೇ ಸಾಮಾಜಿಕವೂ ಹೌದು ಎನ್ನುವುದು ನನ್ನ ತಿಳಿವಳಿಕೆ. ವೈಯಕ್ತಿಕ ಬದುಕಿನ ಸಂಗತಿಗಳಿಗೆ, ಘಟನೆಗಳಿಗೆ, ಸಮಾಜಿಕ ಧೋರಣೆ, ನಂಬಿಕೆಗಳೇ ಕಾರಣ. ಇದನ್ನು ಅರ್ಥಮಾಡಿಕೊಂಡರೆ ಆತ್ಮಕಥೆಯಲ್ಲಿ ಖಾಸಗಿ ವಿಷಯವನ್ನು ಎಷ್ಟು ಹೇಳಬೇಕು? ಹೇಗೆ ಹೇಳಬೇಕು ಎನ್ನುವುದು ಅರಿವಿಗೆ ಬರುತ್ತದೆ. ಇವೆಲ್ಲ ಅವರವರ ಆಯ್ಕೆಗೆ ಬಿಟ್ಟ ಸಂಗತಿ. ಪ್ರಾಮಾಣಿಕತೆಯ ಅಳತೆಗೋಲಾಗಿ, ತನ್ನೆಲ್ಲ ಖಾಸಗಿ ವಿಷಯವನ್ನೂ ಸಮಾಜದೆದುರು ತೆರೆದಿಡುವುದು `ಹುಚ್ಚುತನ’ ಎನಿಸಬಹುದು; ಕೆಲವೊಮ್ಮೆ ಹೀಗೆ ಮಾಡಿದ ವ್ಯಕ್ತಿ `ಮಹಾತ್ಮ’ ಕೂಡ ಆಗಬಹುದು. ಇದರಿಂದ ಸಮಾಜಕ್ಕೆ ಉಪಯೋಗವಿದೆ ಎಂದರೆ ಇದರಲ್ಲಿ ತಪ್ಪೇನು ಇಲ್ಲ. ಮಹಿಳೆಯ ವಿಷಯದಲ್ಲಂತೂ ಇಂಥ ಪ್ರಾಮಾಣಿಕತೆಯನ್ನು ಸಮಾಜ ಹೇಗೆ ಸ್ವೀಕರಿಸುತ್ತದೆ ಎನ್ನುವುದು ಉಳಿದವರಿಗೆ `ಮಾದರಿ’ಯೋ ಅಥವಾ ಎಚ್ಚರಿಕೆಯೋ ಆದೀತು.

      ಮಹಿಳೆ ಮತ್ತು ಪುರುಷರ ಆತ್ಮಕಥೆಗಳನ್ನು ಗಮನಿಸಿದರೆ ಬಹಳ ಭಿನ್ನತೆ ಇರುವುದು ಕಂಡುಬರುತ್ತದೆ. ಮಂಗಳೂರಿನಲ್ಲಿ ನಡೆದ ವಿಚಾರಸಂಕಿರಣದಲ್ಲಿ ಈ ವಿಷಯವೂ ಪ್ರಸ್ತಾಪವಾಗಿತ್ತು. `ಪುರುಷರು ತಮ್ಮ ವೈಯಕ್ತಿಕ ವಿಷಯಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುವುದಿಲ್ಲ. ಮಹಿಳೆಯರ ಆತ್ಮಕಥೆ ತಮ್ಮ ವೈಯಕ್ತಿಕ ಬದುಕಿನ ಪಾತಳಿಯಲ್ಲಿ ಸುತ್ತುತ್ತದೆ. ವೈಯಕ್ತಿಕ ಬದುಕಿಗಿಂತ ಸಾರ್ವಜನಿಕ ಬದುಕು ಅತ್ಯಂತ ಮಹತ್ವಪೂರ್ಣ ಎನ್ನುವುದು ಪುರುಷ ಧೋರಣೆ’ ಎನ್ನುವುದಾಗಿ. ಅವರು ತಮ್ಮ ಆತ್ಮಕಥೆಯಲ್ಲಿ `ಇವಳೊಂದಿಗೆ ತನ್ನ ಮದುವೆ ಯಾಯಿತು’ ಎನ್ನುವುದರ ಹೊರತು ತಮ್ಮ ಪತ್ನಿಯ ಕುರಿತು ಮತ್ತೇನನ್ನೂ ದಾಖಲಿಸುವುದಿಲ್ಲ. ಅಂದರೆ ಅವರ ಬದುಕಿನಲ್ಲಿ ಪತ್ನಿಗೆ ನೀಡಿದ ಮಹತ್ವ ಒಂದು ಸಾಲಿನದು ಮಾತ್ರ ಎಂದು ತಿಳಿಯಬೇಕೇ? ಮಹಿಳೆಯಂತೆ ತಾನು ಕುಟುಂಬಕ್ಕೆ ಮಾತ್ರ ಸೀಮಿತನಲ್ಲ ಎಂದು ಭಾವಿಸಿ, ಕುಟುಂಬವನ್ನು ಕಡೆಗಣಿಸಿದಾಗ ಕುಟುಂಬದ ಸ್ಥಿತಿ ಏನಾಗುತ್ತದೆ ಎನ್ನುವ ಪ್ರಶ್ನೆಗೆ ಮಹಿಳಾ ಆತ್ಮಕಥೆಯಲ್ಲಿ ಕೆಲಮಟ್ಟಿನ ಉತ್ತರ ದೊರೆಯುತ್ತದೆ.

      ಹಲವರ ಆತ್ಮಕಥೆ ಆತ್ಮರತಿಯಲ್ಲಿ ಬಳಲುತ್ತಿರುವುದು ಕಂಡುಬರುತ್ತಿದೆ. ಆತ್ಮಕಥೆಯ ತುಂಬ `ನಾನು’ ಪ್ರಧಾನವಾಗಿ ಕುಟುಂಬ, ಸಮಾಜ, ಪರಿಸರ ಎಲ್ಲ ನಗಣ್ಯವಾಗಿಬಿಟ್ಟಿರುತ್ತದೆ. ಆತ್ಮಕಥೆ ಬರೆಯುವುದು ಇನ್ನೊಬ್ಬರ ಅವಹೇಳನಕ್ಕಾಗಲಿ, ತನ್ನ ಹಿರಿಮೆಯನ್ನು ಕಾಣಿಸಲಿಕ್ಕಾಗಲಿ ಆಗದೆ ಇತಿಹಾಸದ ಒಂದು ಘಟ್ಟದಲ್ಲಿನ ಸಾಮಾಜಿಕ ಬದುಕಿನ ಸಂದರ್ಭವನ್ನು ಅನಾವರಣಗೊಳಿಸುವಂತಿದ್ದರೆ ಅದೊಂದು ಉಪಯುಕ್ತ ದಾಖಲೆ. ನಾನು ಗಮನಿಸಿರುವಂತೆ ಆತ್ಮಕಥೆಗಳು ಎಂದು ಬರೆದವುಗಳಲ್ಲಿ ಹಲವು ಆತ್ಮಕಥೆಗಳಾಗಿರದೆ ಅವರ ಬದುಕಿನ ವಿವರಗಳೇ ತುಂಬಿದ್ದು ಅನುಭವ ಕಥನಗಳಾಗಿವೆ.

      ಸಾಹಿತ್ಯಿಕವಾಗಿ, ಸಾಮಾಜಿಕವಾಗಿ ಆತ್ಮಕಥೆಗಳಿಗೆ ಒಂದು ಮಹತ್ವದ ಸ್ಥಾನವಿದೆ. ವ್ಯಕ್ತಿಯ ಖಾಸಗಿ ಬದುಕನ್ನು ತೆರೆದಿಡದ ಆತ್ಮಕಥೆಗೆ ಜೀವಂತಿಕೆ ಇರುವುದಿಲ್ಲ; ಸಾಮಾಜಿಕ ಪರಿಸರ ಅಲ್ಲಿ ಅನಾವರಣ ಗೊಳ್ಳದಿದ್ದಲ್ಲಿ ಸಾರ್ವಕಾಲಿಕತೆಗೆ ಇಂಬು ದೊರೆತಿರುವುದಿಲ್ಲ. ಯಾವುದೇ ಆತ್ಮಕಥೆಯಲ್ಲಿ ಇವೆರಡೂ ಅಂಶಗಳು ಒಂದು ಹದದಲ್ಲಿ ಬೆರೆತಾಗ ಮಾತ್ರ ಅದಕ್ಕೊಂದು ಸಾಮಾಜಿಕ ಮುಖ ಪ್ರಾಪ್ತವಾಗುತ್ತದೆ; ಸಮಾಜದ ದೃಷ್ಟಿಯಿಂದ ಗಮನಾರ್ಹ ಎನಿಸಿಕೊಳ್ಳುತ್ತದೆ

Read Full Post »

ಮನ್ನ

(ಸಣ್ಣ ಕತೆ)

`ಹಗ್ಗ,, ಕತ್ತೀನ ಮತ್ತೆ ಇಲ್ಲೇ ತಂದಿಡಾ…’ ಎಂಬ ನನ್ನ ಸೂಚನೆಗೆ ಸಣ್ಣದೊಂದು ಮುಗುಳ್ನಗೆ ಬೀರಿ, ಗೋಣಲ್ಲಾಡಿಸಿ ಮುನ್ನಡೆದ ಮನ್ನ. ಅವನ ಕಾರ್ಯಾಚರಣೆ ನಡೆಯುವುದೇ ಕತ್ತಲಾದ ಮೇಲೆ. ಅದೇನು ವೀರಪ್ಪನ್ ಹಿಡಿಯುವಂಥ ಮಹತ್ತರ ಕಾರ್ಯಾಚರಣೆಯಲ್ಲ, ಜೇನು ತೆಗೆಯುವುದಷ್ಟೇ. ನಮ್ಮೂರಲ್ಲಿ ಹಗಲು ಹೊತ್ತಿನಲ್ಲಿ ಜೇನು ತೆಗೆಯುವವರು ಯಾರೂ ಇಲ್ಲ. ಅಂದರೆ ರಾತ್ರಿ ತೆಗೆಯುವವರು ಬೇಕಷ್ಟಿದ್ದಾರೆ ಎಂದಲ್ಲ, ಎಲ್ಲೋ ಮನ್ನನಂಥ ಒಂದಿಬ್ಬರು ತೆಗೆಯುತ್ತಾರಷ್ಟೇ. ಅದರಲ್ಲೂ ಹೇಳಿದ ತಕ್ಷಣ ಮರುಮಾತಾಡದೆ ಜೇನು ತೆಗೆಯುವವನು ಮನ್ನ ಮಾತ್ರ. ಏಕೆಂದರೆ ಆತ ಮೂಕ!

ಆತನ ಹೆಸರೇನು ಎಂಬುದು ಯಾರಿಗೂ ಗೊತ್ತಿಲ್ಲ. ಊರು ತುದಿಗಿರುವ ಒಡ್ಡರ ಕೇರಿಗೆ ಆತ ಸೇರಿದ್ದ ಹೇಗೆ ಎಂಬುದು ಯಾರಿಗೂ ನೆನಪಿಲ್ಲ. ಊರಲ್ಲಿ ಯಾರು ಕರೆದರೂ ಅವರ ಮನೆ ಕೆಲಸ ಮಾಡುವ ಆತನಿಗೆ ಊರೊಟ್ಟಿನ ಹೆಸರುಮನ್ನ‘. ಮಲೆನಾಡಿನ ಬಹಳಷ್ಟು ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುವ ಆತ ಮರ ಹತ್ತಿ ಕರಡಿಯಂತೆ ಜೇನು ತೆಗೆಯುವುದಲ್ಲಿ ನಿಸ್ಸೀಮ. ಶಾಲೆ ಕಾಣದಿದ್ದರೂ, ಮಾತು ಬಾರದಿದ್ದರೂ ತನ್ನ ಮುಗ್ಧ ಕಣ್ಣುಗಳಲ್ಲೇ ಬಹಳಷ್ಟನ್ನು ಹೇಳಿಬಿಡುವ ಜಾಣ. ನಮ್ಮನೆಯಿಂದ ಅಜಮಾಸು ಒಂದೂವರೆ ಮೈಲು ದೂರದಲ್ಲಿರುವ ಬೃಹತ್ ತಾರೆ ಮರದಲ್ಲಿ ಹೆಜ್ಜೇನು ಗೂಡು ಕಟ್ಟಿದೆ ಎಂಬುದನ್ನು ಆತನೇ ನನಗೆ ತಿಳಿಸಿದ್ದ. ಬಸ್ ಸ್ಟಾಪಿನ ಪಕ್ಕದಲ್ಲಿ ರಸ್ತೆ ಅಂಚಿಗಿರುವ ಮರವಾದರೂ ಅದಕ್ಕೆ ಯಾರೂ ಕನ್ನ ಹಾಕಿರಲಿಲ್ಲ. ಹಾಕುವುದು ಸುಲಭವೂ ಇರಲಿಲ್ಲ ಬಿಡಿ, ಸಿಕ್ಕಾಪಟ್ಟೆ ದೊಡ್ಡ ಮರವದು. ಅದರಿಂದ ಜೇನುತುಪ್ಪ ತೆಗೆಯುವ ಕೆಲಸವನ್ನು ಆತನಿಗೇ ಗಂಟು ಹಾಕಿದ್ದರಿಂದ ಮನ್ನನ ಸವಾರಿ ನಮ್ಮನೆಗೆ ಬಂದಿತ್ತು. ಅಗತ್ಯ ಸರಂಜಾಮುಗಳನ್ನು ತೆಗೆದುಕೊಂಡು ಮನ್ನ ಮರೆಯಾಗುವ ಮುನ್ನವೇ, ಬೆಳಗ್ಗೆ ಸವಿಯಲಿರುವ ಹೆಜ್ಜೇನು ತುಪ್ಪದ ಪರಿಮಳ ನನ್ನ ಮೂಗಿಗೆ ಬರಲಾರಂಭಿಸಿತ್ತು!

************** ***************

ಜೇನು ರಟ್ಟಿನಿಂದ ತುಪ್ಪವನ್ನು ಹಿಂಡಿ ಸುರಿಯಲು ಸೂರ್ಯೋದಯದವರೆಗೆ ಕಾಯುವ ತಾಳ್ಮೆಯಿಲ್ಲದೆ ನಾನು ಚಟಪಡಿಸುತ್ತಿದ್ದೆ. ರಾತ್ರಿ ನಿದ್ದೆಯಲ್ಲೂ ಜೇನಿನ ಕನಸೇಒಮ್ಮೆ ನಾನು ಜೇನುತುಪ್ಪ ನೆಕ್ಕಿದಂತೆ, ಮತ್ತೊಮ್ಮೆ ಮನ್ನನಿಗೆ ಜೇನ್ನೊಣಗಳು ಕಚ್ಚಿದಂತೆ. ಅದು ಹಾಗೇ, ತುಪ್ಪ ತಿನ್ನುವುದು ಯಾರೇ ಆದರೂ ಜೇನು ಕಚ್ಚುವುದು ಮಾತ್ರ ಮನ್ನನಿಗೆ! ಆದರೆ ಬೆಳಗ್ಗೆ ನಮ್ಮನೆ ಕದ ತಟ್ಟಿದ್ದು ಜೇನು ತೆಗೆದ ಮನ್ನ ಅಲ್ಲ, ಕೆಟ್ಟದೊಂದು ಸುದ್ದಿನಮ್ಮೂರಿನ ಶ್ಯಾಮಲಾ ಕೊಲೆಯಾದಳಂತೆ! ಹಿಂದಿನ ದಿನ ಕಾಲೇಜಿನಿಂದ ಮರಳುವಾಗ ಆಕೆ ಬಸ್ ಇಳಿದಿದ್ದನ್ನು ಕೆರೆಹೊಂಡದ ರಾಮಣ್ಣ ನೋಡಿದ್ದಾನಂತೆ. ಆದರೆ ಮನೆ ತಲುಪಲೇ ಇಲ್ಲ. ಬಸ್ಸೇನು ಆಕೆಯ ಮನೆ ಬಾಗಿಲಿಗೆ ಬರುವುದಿಲ್ಲ ಬಿಡಿ, ಏಳೆಂಟು ಫರ್ಲಾಂಗು ದೂರದ ರಸ್ತೆಯಲ್ಲಿದೆ ಬಸ್ ಸ್ಟಾಪು. ಅಲ್ಲಿಂದ ಕಾಡು ದಾರಿಯಲ್ಲೇ ಅವರ ಮನೆ ತಲುಪಬೇಕು. ಅದೇನು ದೊಡ್ಡ ವಿಷಯವಲ್ಲ, ಮಲೆನಾಡಿನ ಮನೆ, ಅದರ ದಾರಿ ಎಲ್ಲವೂ ಇರುವುದು ಕಾಡಿನಲ್ಲೇ. ಆದರೆ ಇದೇನು ಪ್ರಾರಬ್ಧಕರ್ಮ?

ಸಂಜೆ ಐದು ಗಂಟೆಯ ಸಕ್ರೆಬೈಲಿನ ಬಸ್ಸಿಗೆ ಬರಬೇಕಿದ್ದ ಆಕೆ ಕತ್ತಲಾದರೂ ಬಾರದಿದ್ದಾಗ ಮನೆಯವರು ಹುಡುಕಾಟ ಆರಂಭಿಸಿದರಂತೆ, ಬಸ್ ಸ್ಟಾಪಿನಿಂದ ಕೊಂಚ ದೂರದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಪುಸ್ತಕಗಳು ಆಕೆಯ ದೇಹದ ಸುಳಿವು ನೀಡದವಂತೆ, ಕುತ್ತಿಗೆಯನ್ನು ಬಿಗಿಯಲಾಗಿದೆಯಂತೆ, ಮೈಮೇಲೆ ಆಳವಾದ ಗಾಯಗಳಿವೆಯಂತೆ, ಹಾಗಂತೆ, ಹೀಗಂತೆಊರೆಲ್ಲಾ ತಲ್ಲಣ. ಯಾರಡ? ಏನಡ? ಹ್ಯಾಂಗಡ?’ ಎಂಬ ಸರಪ್ರಶ್ನೆಗಳು;

ಅವುಗಳ ಬೆನ್ನಿಗೆಅಯ್ಯೋ, ಹಾಂಗಲ್ಲಯಂಗೊತ್ತಿದ್ದುಹೀಂಗಡ ಎಂಬ ಉತ್ತರಗಳು;

ಜೊತೆಗೆಛೇ, ಪಾಪ! ಗನಾ ಕೂಸು. ಹೀಂಗಾಗ್ತು ಹೇಳಿ ಕನ್ಮನ್ಸಲ್ಲೂ ಅಂದ್ಕಂಡಿದ್ನಿಲ್ಲೆಎಂಬ ಉದ್ಗಾರಗಳು;

ನಡುವೆಬಪ್ಪದು ಲೇಟಾಗ್ತು ಹೇಳಿ ಕೂಸು ಫೋನ್ ಮಾಡಿತ್ತಡ ಇಲ್ಯಡ, ಅವರ್ಮನೆ ಫೋನು ಹಾಳಾಗಿತ್ತಡ ಎಂಬ ಕಿಂವದಂತಿಗಳು ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ರೆಕ್ಕೆಪುಕ್ಕ ಕಟ್ಟಿ ಊರು ತುಂಬಾ ಹಾರಾಡಲಾರಂಭಿಸಿದ್ದವು. ನಮ್ಮೂರಿನ್ ಪಕ್ಕ ಹೆದ್ದಾರಿ ಮಾಡಿದಾಗ್ಲೇ ಹೇಳಿದ್ವಿಲ್ಯನಮ್ಮ್ ಉಪಕಾರಕ್ಕಿಂತ ಕಳ್ರು, ಸುಳ್ರಿಗೇ ಲಾಯ್ಕಾಗ್ತು ಹೇಳಿ. ಯಂತಾ ಅಭಿವೃದ್ಧಿಯೊ ಮಣ್ಣೋ ಸರಕಾರದ್ದುಈಗ್ನೋಡಿ! ಏನೇನೆಲ್ಲಾ ಆಗ್ತಿದ್ದುಎಂದು ಇತ್ತೀಚೆಗಷ್ಟೇ ಸೊಸೈಟಿ ನೌಕರಿಯಿಂದ ನಿವೃತ್ತರಾದ ಸುಬ್ಬಣ್ಣ ಸಿಡುಕಿದರು.

ಮೊದ್ಲಿನ್ಹಾಂಗೆ ಹತ್ತನೆಇಯತ್ತೆ ಆದ ಕೂಡ್ಲೆ ಹೆಣ್ಣು ಹುಡುಗ್ರ ಮದುವೆ ಮಾಡಿದ್ರೆ ಸರಿಯಾಗ್ತು. ಇವಕ್ಕೆಲ್ಲಾ ಕಾಲೇಜು ಕಲ್ತು ಎಲ್ಲಿ ಅಮಲ್ದಾರಿಕೆ ಮಾಡವ್ವು? ಕಲಿಗಾಲ…’ ಎಂದು ಎಂಬತ್ತು ತುಂಬಿದ ಯಮುನಜ್ಜಿ ಅಲವತ್ತುಕೊಂಡರು.

ಪೇಟೆಲ್ಲಿದ್ದ ಮನೆ, ಅಂಗ್ಡಿ ಎಲ್ಲಾ ಬಿಟ್ಟು ಇಲ್ಲಿ ಹಿಸ್ಸೆ ತಗಂಡ್ ಕುಂತಿದ್ದು ಯಾವ್ ಸೌಭಾಗ್ಯಕ್ಕೆ? ಇದ್ದೊಂದು ಬಂಗಾರ್ದಂತ ಮಗಳೂ ಅವ್ರ ಕೈತಪ್ಪಿ ಹೋತಲ್ಲಾಎಂದು ಶ್ಯಾಮಲಾಳ ಹೆತ್ತವರಿಗಾಗಿ ಹಲವರು ಹಲುಬಿದರು.

ಏನು ಹೇಳಿದರೇನು? ಶ್ಯಾಮಲಾ ಹೋಗಿಯಾಗಿತ್ತು. ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದರು.

*************************************

ಎಷ್ಟೇ ತನಿಖೆ ನಡೆಸಿದರೂ ಕೊಲೆಯಾಗಿ ವಾರ ಕಳೆದರು ಯಾರ ಬಂಧನವೂ ಆಗಲಿಲ್ಲ. ಊರಲ್ಲಿ ಇದ್ದಬಿದ್ದವರ ವಿಚಾರಣೆ ನಡೆಸಲಾಗಿತ್ತು. ಸಂಶಯ ಬಂದವರನ್ನೆಲ್ಲಾ ಪೊಲೀಸ್ ಠಾಣೆಗೆ ಕರೆಸಿವಿಚಾರಿಸಿಕೊಳ್ಳಲಾಗಿತ್ತು‘. ಕೊಲೆಗಾರನನ್ನು ಬಂಧಿಸಲೇಬೇಕೆಂದು ಜನರ ಮತ್ತು ಮಾಧ್ಯಮಗಳ ಒತ್ತಡದಿಂದ ತನಿಖೆ ತೀವ್ರವಾಗೇ ನಡೆಯುತ್ತಿತ್ತು. ಊರಿನವರು ಮಾತ್ರವಲ್ಲ, ಅವರ ನೆಂಟರಿಷ್ಟರ ವಿಚಾರಣೆಯೂ ಆರಂಭವಾಗಿತ್ತು. ಈಗಂತೂ ನಮ್ಮೂರಿಗೆ ಬರಲು ಪೇಟೆಯಲ್ಲಿದ್ದ ಆಟೋದವರು ಕಬೂಲಾಗುತ್ತಿರಲಿಲ್ಲ. ಬಸ್ಸಿನಲ್ಲಿ ನಮ್ಮೂರಿನ ಸ್ಟಾಪಿಗೆ ಟಿಕೆಟ್ ತೆಗೆದುಕೊಂಡವರನ್ನು ಯಾರೂ ಮಾತನಾಡಿಸುತ್ತಿರಲಿಲ್ಲ. ವಿಚಾರಣೆ ಭಯದಿಂದ ಯಾವ ಸಂಬಂಧಿಕರೂ ಬಾರದೆ ನಮ್ಮೂರು ಒಂಥರಾ ದ್ವೀಪದಂತಾಗಿಬಿಟ್ಟಿತ್ತು. ಮಲೆನಾಡಿನ ಮೂಲೆಯಲ್ಲಿ ಮುದುಡಿ ಕುಳಿತಿದ್ದ ಸಕ್ರೆಬೈಲು ಈಗ ಸುದ್ದಿಯ ಕೇಂದ್ರವಾಗಿತ್ತು.

ಇತ್ತ, ಶ್ಯಾಮಲಾಳ ವಾರಿಗೆಯ ಒಂದಿಬ್ಬರು ಹೆಣ್ಣುಮಕ್ಕಳು ಭಯದಿಂದ ಕಾಲೇಜು ಬಿಟ್ಟಿದ್ದರು. ‘ಯಮ್ಮನೆ ಕೂಸು ಓದಿದ್ದು ಸಾಕು. ಮುಂದಿನ ವರ್ಷನೇ ಜಾತ್ಕ ಹೊರಗೆ ಹಾಕ್ತ್ಯ ಎಂದು ಅವರ ಮನೆಯವರು ಘೋಷಿಸಿಯೂಬಿಟ್ಟರು. ನಮ್ಮೂರಲ್ಲಿ ಎಲ್ಲರ ಮನೆಗೂ ಇರುವುದು ಕಾಡು ದಾರಿಯೇ. ಬಸ್ಸಿಳಿದ ಮೇಲೆ ಅಷ್ಟಿಷ್ಟು ದೂರ ಒಂಟಿಯಾಗಿಯೇ ನಡೆಯಬೇಕು. ಆದರೂ ನಾಲ್ಕಾರು ದಿಟ್ಟೆಯರು ಓದು ಮುಂದುವರಿಸಿದರು. ಆದರೆ ಅವರಿಗಿದ್ದ ಧೈರ್ಯ ಅವರ ಪಾಲಕರಿಗೆ ಇಲ್ಲದಿದ್ದರಿಂದ, ದಿನಾ ಬಸ್ಸು ಬರುವ ಹೊತ್ತಿಗೆ ಹುಡುಗಿಯರ ಅಪ್ಪನೊ, ಅಣ್ಣನೊ, ತಮ್ಮನೊ ಬಸ್ ಸ್ಟಾಪಿಗೆ ಹಾಜರಾಗತೊಡಗಿದರು. ದಿನಾ ಬೆಳಗ್ಗೆ ಮತ್ತು ಸಂಜೆ ಅಲ್ಲೊಂದು ಸಣ್ಣ ಹರಟೆಕಟ್ಟೆಯೇ ಸೃಷ್ಟಿಯಾಯಿತು. ಕೊಲೆಗಾರ ಸಿಗದಿದ್ದರೂ, ಒಂದು ಪತ್ತೆದಾರಿ ಕಾದಂಬರಿಗೆ ಸಾಕಾಗುವಷ್ಟು ಕಾಲ್ಪನಿಕ ಸರಕು ಹರಟೆಕಟ್ಟೆಯಲ್ಲಿ ಸೃಷ್ಟಿಯಾಗುತ್ತಿತ್ತು.

ದಿನ ಸಂಜೆ ಇಲ್ಯಾವ್ದೊ ಬಿಳಿ ಕಾರು ಬಂದಿತ್ತಡ. ಈಗ ನೀ ನಿಂತಿದ್ದ ಜಾಗ ಇದ್ದಲ್ಲಾಸುಮಾರು ಹೊತ್ತು ಅಲ್ಲೇ ನಿಂತಿತ್ತಡ

ಅಲ್ಲಲ್ಲಬಿಳಿ ಕಾರಲ್ಲಕೆಂಪು ಇಂಡಿಕಾ ಕಾರಡ. ಪಕ್ಕದ ಹೆದ್ದಾರಿಯಲ್ಲಿ ಹೋಪ ಮೋಟರ್ ಸೈಕಲ್ಲಿನ ಜನ ಕಾರು ನೋಡಿದ್ವಡ. ನಾಲ್ಕೊ, ಎಂಟೊ ಜನ ಇದ್ದಿದ್ವಡ

ಕೊಲೆಯಾದ ವಾರದೊಳಗೇ ಯಾರನ್ನೋ ಬಂಧಿಸಿದ್ವಡ. ಆದರೆ ದಿಲ್ಲಿಯಿಂದ ಫೋನ್ ಬಂದ ಮೇಲೆ ಬಿಟ್ಟಿದ್ವಡ. ಅಂವ ಯಾರೋ ಭಾರಿ ದೊಡ್ಡ ಕುಳನಡ‘…

ಮಧ್ಯೆ ಕೊಲೆಗಾರನನ್ನು ಬಂಧಿಸಲಾಗಿದೆ ಎಂಬ ಸುದ್ದಿಯೂ ಬಂತು.

********************************************

ಶ್ಯಾಮಲಾ ಕೊಲೆ ಆಗಿದ್ದಕ್ಕಿಂತ ದೊಡ್ಡ ಸಂಚಲನವನ್ನು ಸುದ್ದಿ ಸೃಷ್ಟಿಸಿತ್ತು. ತಂಪಾಗಿದ್ದ ಜಾಗದಲ್ಲಿ ಪರಿ ಕಿಚ್ಚು ಹಚ್ಚಿದ್ದು ಯಾರು ಎಂಬ ಕುತೂಹಲ ಮೇರೆ ಮೀರಿತ್ತು. ಹೆಸರು, ಜಾತಿ, ಕುಲಗೋತ್ರ, ಬಣ್ಣ, ಉದ್ದ, ಅಗಲದಿಂದ ಹಿಡಿದು ಅವನ ಯೋಗ್ಯತೆ ಬಗ್ಗೆ ಸರ್ವರೂ ಮತ್ತ ಶಕ್ತ್ಯಾನುಸಾರ ವದಂತಿಗಳನ್ನು ಹಬ್ಬಿಸಿದರು. ಅವನ ಹೆಸ್ರು ಕೇಶವನಡಅಲ್ಲ, ಕಾಶಿಮನಡ…’

‘ಅವ್ನ ಕೆಲ್ಸ ಪ್ಯಾಟೆಲ್ಲಿ ಬಿಸಿನೆಸ್ಸಡಅಯ್ಯೋ ಅಲ್ಲ, ಸೋಪ್ಮಾರೋನಡ

ಥೋ ಥೋಅಂವ ಹಸೀ ಮೂರು ಕಾಸಿನವನಡ. ದಗಾಬಾಜಿ ಮಾಡ್ತಾನೆ ಇದ್ದವ ಹೇಳಾತು

ತಾನು ಅಲ್ಲವೇ ಅಲ್ಲ ಹೇಳಿದ್ನಡ, ಪೊಲೀಸರಿಂದ ಸರಿ ಖರ್ಚಿಗೆ ಸಿಕ್ಕಿದ್ಮೇಲೆ ಹೌದು ಹೇಳಿದ್ನಡ

‘ಎಲ್ಲಾ ಬಾಯಿ ಬಿಟ್ಟಿದ್ನಡಶ್ಯಾಮಲಾನ ಹಿಂದೆ ಬಿದ್ದು ಸುಮಾರು ದಿನ ಆಗಿತ್ತಡ. ಅದ್ನ ಕೊಂದ ಹಗ್ಗ, ಕತ್ತಿ ಎಲ್ಲಾ ಸಿಕ್ಕಿದ್ದಡ

ಮರುದಿನದ ಪತ್ರಿಕೆ ಬರುವುದರೊಳಗೆ ಸುದ್ದಿಯ ಚಂಡಮಾರುತವೇ ನಮ್ಮೂರನ್ನು ಹಾದುಹೋಗಿತ್ತು. ಯಾವುದು ಹೌದು, ಯಾವುದು ಅಲ್ಲ ಎಂಬುದೇ ತಿಳಿಯದಷ್ಟು ವದಂತಿಗಳು ತಿರುಗುತ್ತಿದ್ದವು. ಪತ್ರಿಕೆಯನ್ನು ಅವನ ಫೋಟೊ ಸಹ ಬಂದಿದೆ ಎಂಬುದನ್ನು ತಿಳಿದು ಲಗುಬಗೆಯಿಂದ ಪುಟ ಬಿಡಿಸಿದೆ.

ಪೊಲೀಸರ ನಡುವೆ ನಿಂತಿದ್ದ ಮನ್ನ! ಹಾಗಾದರೆ ಆತ ವಿಚಾರಣೆಯಲ್ಲಿ ಏನು ಹೇಳಿದ, ಹೇಗೆ ಹೇಳಿದ…? ಕಂಗಾಲಾಗಿ ಮತ್ತೆ ಮತ್ತೆ ಫೋಟೊ ನೋಡಿದೆಹೌದು, ಅವನೇ! ಅಸಹಾಯಕ ಮುಖ, ಅದೇನನ್ನೋ ಹೇಳಬೇಕೆಂದು ಚಡಪಡಿಸುತ್ತಿದ್ದ ಕಣ್ಣುಗಳು

(2007ರ ಕನ್ನಡಪ್ರಭ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟವಾದ ಕತೆ)

Read Full Post »

« Newer Posts